ಬೆಳಗಾವಿ: ‘ನಾನು 20 ದಿನಗಳ ಹಿಂದೆಯೇ ವಯನಾಡಿನಲ್ಲಿ ಭೀಕರ ದುರಂತ ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದೆ…’ ಹೀಗೆಂದವರು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು.
ಅವರು ವಯನಾಡು ಭೂಕುಸಿತ ಸಂಬಂಧ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ‘ಕಳೆದ ಇಪ್ಪತ್ತು ದಿನಗಳ ಹಿಂದೆಯೇ ವಯನಾಡಿನಲ್ಲಿ ದುರಂತ ಸಂಭವಿಸುತ್ತದೆ. ಮಳೆಯಿಂದಾಗಿ ಗುಡ್ಡ ಕುಸಿದು, ಜನರ ಸಾವು ಆಗುತ್ತದೆ. ಅದಲ್ಲದೆ ರೋಗ ರುಜಿನಗಳು ಹೆಚ್ಚಾಗುತ್ತದೆ . ಇದು ಜಾಗತಿಕವಾಗಿಯೂ ಕೆಲ ರಾಜ್ಯಗಳಲ್ಲೂ ಹೀಗೇ ಸಂಭವಿಸುತ್ತುದೆ’ ಎಂದು ಹೇಳಿದ್ದೆ ಎಂದಿದ್ದಾರೆ.
ಇನ್ನೂ ಪ್ರಸ್ತುತ ಮಳೆಯಾಗುತ್ತಿವ ಬಗ್ಗೆ ಹೇಳಿದ ಅವರು, ‘ಅಮಾವಾಸ್ಯೆವರೆಗೆ ಮಳೆ ಜೋರಾಗಿ ಸುರಿಯಲಿದೆ. ಬಳಿಕ ಬೇರೆ ಭಾಗಕ್ಕೆ ಹೋಗುತ್ತೆ. ಇದು ಕ್ರೋಧಿನಾಮ ಸಂವತ್ಸರ, ಕ್ರೋಧಿ ಅಂದ್ರೆ ಸಿಟ್ಟು ಇದರಲ್ಲಿ ಒಳ್ಳೆಯದ್ದೂ ಇದೆ, ಕೆಟ್ಟದ್ದೂ ಇದೆ. ಈ ಪೈಕಿ ಕೆಟ್ಟದ್ದೇ ಜಾಸ್ತಿ ಇರುತ್ತೆ. ಈ ಪ್ರಾಕೃತಿಕ ದೋಷ ಮುಂದುವರಿಯುತ್ತೆ. ಮುಂದೆ ಅನಿಷ್ಠ ಜಾಸ್ತಿ ಇದೆ, ಕತ್ತಲು ಬೆಳಕು ಎರಡು ಇರುತ್ತೆ ಅದರಲ್ಲಿ ಕತ್ತಲು ಜಾಸ್ತಿ ಇರುತ್ತೆ’ ಎಂದು ಸ್ವಾಮೀಜಿ ಭವಿಷ್ಯ ನುಡಿದರು.
ಅದಲ್ಲದೆ ‘ರಾಜ್ಯದಲ್ಲಿ ಜಲಕಂಟಕ ಮತ್ತು ಪ್ರಕೃತಿ ವಿಕೋಪ ಮುಂದುವರಿಯಲಿದೆ. ರಾಜ್ಯದಲ್ಲಿ ಲಾಭಕ್ಕಿಂತ ಹಾನಿ ಜಾಸ್ತಿಯಾಗಲಿದೆ’ ಎಂದರು.