Site icon ಒಡನಾಡಿ

ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳುವರೆ ಸಂತ್ರಸ್ಥರನ್ನು ಭೇಟಿಯಾಗಿ ಧನ ಸಹಾಯ ಮಾಡಿದ ದೇಶಪಾಂಡೆ

ಕುಮಟಾ : ಶಿರೂರು ಗುಡ್ಡ ಕುಸಿತದಿಂದ ಗಾಯಗೊಂಡು ಕುಮಟಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಉಳುವರೆಯ ಸಂತ್ರಸ್ಥರನ್ನು ಭೇಟಿಯಾಗಿ ಆರೋಗ್ಯ ವುಚಾರಿಸಿದ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್. ವಿ. ದೇಶಪಾಂಡೆಯವರು ಗಾಯಳುಗಳಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು.

ಬೆಂಗಳೂರಿಂದ ಆಗಮಿಸಿದ ಆರ್.ವಿ ದೇಶಪಾಂಡೆಯವರು ನೇರವಾಗಿ ಶಿರೂರಿನಲ್ಲಿ ಗುಡ್ಡ ಕುಸಿತವಾದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿಯನ್ನ ಪಡೆದರು. ನಂತರ ಈ ಗುಡ್ಡ ಕುಸಿತದಿಂದ ಮಣ್ಣು ಪಕ್ಕದಂಡೆಗೆ ಸಿಡಿದು ಹಾನಿಗೊಳಗಾದ ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ದಯನೀಯ ಸ್ಥಿತಿಯನ್ನು ವೀಕ್ಷಿಸಿದರು.

ತದನಂತರದಲ್ಲಿ ಈ ಘಟನೆಯಲ್ಲಿ ಗಾಯಗೊಂಡು ಸದ್ಯ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ಜನ ಗಾಯಾಳುಗಳನ್ನ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಹಾನಿಗೊಳಗಾಗಿರುವ ಅವರ ಮನೆ ಹಾಗೂ ಇತರೆ ಆಸ್ತಿಪಾಸ್ತಿಗಳ ಬಗ್ಗೆ ಸರಕಾರದಿಂದ ಸಹಾಯ ಒದಗಿಸುವ ಭರವಸೆ ನೀಡಿದ ದೇಶಪಾಂಡೆಯವರು ತಮ್ಮ ವೈಯಕ್ತಿಕ ನಾತೆಯಿಂದ ಅವರಿಗೆ ಧನಸಹಾಯ ಹಾಗೂ ಬಟ್ಟೆ ಮತ್ತು ಹಣ್ಣು ಹಂಪಲುಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಕುಮಟಾ ಕಾಂಗ್ರೆಸ್ ಮುಖಂಡ ಹೊನ್ನಪ್ಪ ನಾಯಕ, ವಾಸರಕುದ್ರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ ನಾಯಕ ಮುಂತಾದವರು ಉಪಸ್ಥಿತರಿದ್ದರು.

Exit mobile version