Site icon ಒಡನಾಡಿ

ಮೇ 19 ರಂದು ಡಾ. ವಿಠ್ಠಲ ಭಂಡಾರಿ ನೆನಪಿನ ಮೂರನೇ ವರ್ಷದ ಕಾರ್ಯಕ್ರಮ

ಪ್ರೀತಿಪದಗಳ ಸಹಯಾನಿ, ಸಂವಿಧಾನ ಓದು ಅಭಿಯಾನದ ರುವಾರಿ ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷದ ಕಾರ್ಯಕ್ರಮ ದಿ. ೧೯-೫-೨೦೨೪ ರಂದು ಬೆಳಿಗ್ಗೆ ೧೦ ಗಂಟೆಯಿಂದ ಹೊನ್ನಾವರದ ಕರೆಕೋಣದ ಸಹಯಾನದ ಅಂಗಳದಲ್ಲಿ ನಡೆಯಲಿದೆ.

ಸಮಾನತೆಯನ್ನು ಬಯಸುವುದು ಅಪರಾಧವೆ?” ಈ ವಿಷಯದ ಕುರಿತು ವಿಶೇಷ ಉಪನ್ಯಾಸ, ಒಡನಾಟದ ನೆನಪು, ಗಾನಸುಧೆ ಕಾರ್ಯಕ್ರಮ ನಡೆಯಲಿದೆ. ನಾಡಿನ ಪ್ರಸಿದ್ಧ ಕತೆಗಾರರು ಕಾದಂಬರಿಕಾರರು, ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೂ ಆಗಿರುವ ಡಾ. ಆರ್ ಸುನಂದಮ್ಮ ಉದ್ಘಾಟನೆ ಮಾಡಲಿದ್ದಾರೆ. ಸಂಸ್ಕೃತಿ ಚಿಂತಕ, ಸಾಹಿತಿ ಡಾ. ರಾಜಪ್ಪ ದಳವಾಯಿಯವರು “ಸಮಾನತೆಯನ್ನು ಬಯಸುವುದು ಅಪರಾಧವೆ?” ಎಂಬ ವಿಷಯದ ಬಗ್ಗೆ ವಿಠ್ಠಲ ನೆನಪಿನ ವಿಶೇಷ ಉಪನ್ಯಾಸ ನೀಡಲಿದ್ದಾರೆ. ರಂಗಸಂಘಟಕ ಬರಹಗಾರ ಟಿ. ಸುರಂದ್ರರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಜಿ. ಸುಮಿತ್ ಕುಮಾರ್ ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ ಇದೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಸಾಹಿತಿ ಬರಹಗಾರರು, ಪತ್ರಕರ್ತರು, ಹೋರಾಟಗಾರರು ಒಡನಾಟದ ನೆನಪು ಹಂಚಿಕೊಳ್ಳಲಿದ್ದಾರೆ. ಒಂದಿಡೀ ದಿನ ವಿಠ್ಠಲನ ನೆನಪಿನಲ್ಲಿ ವೈಚಾರಿಕ ಕರ್ತವ್ಯದೊಡನೆ ಸೇರೋಣ. ತಾವೂ ಆಗಮಿಸಿ ಎಂದು ಸಹಯಾನದ ಗೌರವಾಧ್ಯಕ್ಷ ಶಾಂತಾರಾಮ ನಾಯಕ, ಹಿಚ್ಕಡ, ಕಾರ್ಯಾಧ್ಯಕ್ಷ ಶ್ರೀಪಾದ ಭಟ್, ಕಾರ್ಯದರ್ಶಿ ಮಾಧವಿ ಭಂಡಾರಿ, ಖಜಾಂಚಿ ಯಮುನಾ ಗಾಂವಕರ ಮನವಿ ಮಾಡಿದ್ದಾರೆ.

Exit mobile version