ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಬಿ.ಸಿ.ಎ ಕೋರ್ಸ್ ಆರಂಭವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಎಮ್.ಡಿ. ಒಕ್ಕುಂದ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಈ ಕಾಲೇಜಿನ ಪ್ರಗತಿಗೆ ಶಾಸಕ ಆರ್.ವಿ. ದೇಶಪಾಂಡೆಯವರ ಕೊಡುಗೆ ಬಹಳ ದೊಡ್ಡದು. ಇದೀಗ ಅವರ ಪ್ರಯತ್ನದ ಭಾಗವಾಗಿಯೇ ಈ ವರ್ಷದಿಂದ ದಾಂಡೇಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಸಿ.ಎ. ಕೋರ್ಸ್ ಆರಂಭಿಸಲು ಸಮ್ಮತಿ ಸಿಕ್ಕಿದೆ. ದಾಂಡೇಲಿಯಲ್ಲಿಯೇ ಇದು ಮೊದಲ ಬಾರಿ ಬಂದಿರುವ ಕೋರ್ಸ ಆಗಿದೆ. ಸ್ಥಳೀಯರು ಇದರ ಪ್ರಯೋಜನ ಪಡೆದುಕೊಳ್ಳ ಬೇಕು. ಆಸಕ್ತರು ತಕ್ಷಣ ಕಾಲೇಜಿನ ಕಾರ್ಯಾಲಯಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಿ ಪ್ರವೇಶ ಪಡೆಯಬೇಕು. ಕೇವಲ 40 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದ್ದು, ಮೊದಲು ಬಂದವರಿಗೆ ಆಧ್ಯತೆಯಿರುತ್ತದೆ. ನಿಯಮಾನುಸಾರ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು ಎಂದು ಪ್ರಾಚಾರ್ಯ ಡಾ. ಎಮ್.ಡಿ. ಒಕ್ಕುಂದ ತಿಳಿಸಿದ್ದಾರೆ.
ವಿಡಿಯೋ…..