Site icon ಒಡನಾಡಿ

ವಿಜ್ಞಾನವೇ ವೈಚಾರಿಕತೆಯ ಪರಮ ಧರ್ಮ – ಡಾ ಅನಸೂಯಾ ಕಾಂಬಳೆ

ಧರ್ಮ, ಶಾಸ್ತ್ರ, ಪರಂಪರೆಗಳ ಹೆಸರಿನಲ್ಲಿ ಈಗಲೂ ಕೂಡ ಮಹಿಳೆಯ ಮೇಲೆ ಒಂದಿಲ್ಲ ಒಂದು ರೀತಿಯಲ್ಲಿ ಶೋಷಣೆಗಳು ನಡೆಯುತ್ತಲೇ ಇವೆ. ಮಹಿಳೆಯನ್ನು ಈಗಲೂ ಎರಡನೆಯಲ್ಲಿ ಕಾಣಲಾಗುತ್ತಿದೆ. ಇದನ್ನೆಲ್ಲ ಹೋಗಲಾಡಿಸಬೇಕೆಂದರೆ ವಿಜ್ಞಾನ ಒಂದೇ ದಾರಿ . ವಿಜ್ಞಾನವೇ ವೈಚಾರಿಕತೆಯ ಪರಮ ಧರ್ಮ ಎಂದು ಕನ್ನಡ ವಿಶ್ವವಿದ್ಯಾಲಯದ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರೂ ಹಾಗೂ ಲೇಖಕರು ಆದ ಅನುಸೂಯ ಕಾಂಬಳೆ ತಿಳಿಸಿದರು.

ಅವರು ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿದ್ಯಾರ್ಥಿನಿಯರ ಸಂಘ ದವರು ಕಾಲೇಜಿನ ಸುಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸರ್ಟಿಫಿಕೆಟ್ ವಿತರಿಸಿ ಮಾತನಾಡುತ್ತಿದ್ದರು.

ಪುರಾಣ ಕಾಲದಲ್ಲಿಂದಲೂ ಕೂಡ ಮಹಿಳೆಯನ್ನು ಶೋಷಿಸುತ್ತಿರುವ ಬಗೆಯ ಬಗ್ಗೆ ಕಥನಗಳನ್ನು ಉದಾಹರಿಸಿದ ಅನುಸೂಯ ಕಾಂಬಳೆಯವರು ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ ಇಂತಹ ವೈರುಧ್ಯಗಳಿಂದ ಹೊರಬರಲು ಬಿ.ಆರ್. ಅಂಬೇಡ್ಕರರು ಹೇಳುವ ಹಾಗೆ ಶಿಕ್ಷಣ ಒಂದೇ ಮಾರ್ಗ. ಸಮ ಸಮಾಜದ ನಿರ್ಮಾಣಕ್ಕಾಗಿ ಸಮುದಾಯದೊಳಗೆ ಅರಿವು ಮೂಡಿಸಬೇಕಾದ , ಅಗತ್ಯತೆ ಇದ್ದರೆ ಚಳುವಳಿ ರೂಪಿಸಬೇಕಾದ ಅಗತ್ಯವಿದೆ. ಮಹಿಳಾ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ ಮೂಲಕ ವಿದ್ಯಾರ್ಥಿನಿಯರುಈ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ. ಎನ್ . ಮಾಸರೆಯವರು ಕೆಲ ಕಾಲೇಜುಗಳಲ್ಲಿ ತರಗತಿ ಮುಗಿಸಿದರೆ ಸಾಕಪ್ಪ ಎನ್ನುವ ಮನಸ್ಥಿತಿಯಲ್ಲಿರುವಂತ ಸಂದರ್ಭದಲ್ಲಿ ದಾಂಡೇಲಿಯ ಸರಕಾರಿ ಪದವಿ ಕಾಲೇಜಿನಲ್ಲಿ ಕಲಿಕೆಗೆ ಪೂರಕವಾದ ಮಹಿಳಾ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ ನ್ನ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಿಜಕ್ಕೂ ಇದು ಪರಿಣಾಮಕಾರಿಯಾದ ಕಾರ್ಯಕ್ರಮ. ಗಂಡು ಹುಟ್ಟಿದರೆ ಪೇಡ ಹಂಚುವ , ಹೆಣ್ಣು ಹುಟ್ಟಿದರೆ ಜಿಲೇಬಿ ಹಂಚುವ ನಾವುಗಳು ಅಲ್ಲಿಯೂ ತಾರತಮ್ಯವನ್ನು ಮಾಡುತ್ತಿದ್ದೇವೆ. ಮಹಿಳಾ ದೌರ್ಜನ್ಯ, ಶೋಷಣೆ ಇವುಗಳು ಭಾಷಣಕ್ಕೆ , ಪ್ರಬಂಧಕ್ಕೆ ಸೀಮಿತವಾಗಿರದೆ ಸಮಾಜದೊಳಗೆ ಆರಿವು ಮೂಡಿಸುವ ಸಂದರ್ಭ ಬಂದರೆ ಚಳುವಳಿ ರೂಪಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿ ಕೋಲಾರದಲ್ಲಿ ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಯುವಕ ನನ್ನ ಪ್ರೀತಿ ಮಾಡಿದ ಮಗಳನ್ನು ಕತ್ತು ಹಿಸುಕಿ ಕೊಂದ ತಂದೆಯ ಕೃತ್ಯವನ್ನು ಖಂಡಿಸಿದರು.

ನಗರಸಭೆಯ ಮಾಜಿ ಅಧ್ಯಕ್ಷೆ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ಯಾಸ್ಮಿನ್ ಕಿತ್ತೂರು ಅವರು ಕಾಲೇಜು ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಲು ಈ ಸರ್ಟಿಫಿಕೇಟ್ ಕೋರ್ಸ್ ಸಹಕಾರಿಯಾಗಲಿದೆ ಎಂದರು ಕಾಲೇಜಿನ ಹಿರಿಯ ಪ್ರಾಧ್ಯಾಪಕ ಎಸ್. ವಿ . ಚಿಂಚಣಿ ಮಹಿಳಾ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಂ ಡಿ . ಒಕ್ಕುಂದ ಮಹಿಳೆಯನ್ನು ಎರಡನೆಯ ದರ್ಜೆಯ ಸಾಲಿನಲ್ಲಿ ಕಾಣುವುದು ಸರಿಯಾದ ಕ್ರಮವಲ್ಲ. ದೌರ್ಜನ್ಯ, ಶೋಷಣೆಗಳನ್ನು ದಿಕ್ಕರಿಸಿ ಅದರಾಚೆ ನಾವು ಈ ದೇಶದ ಸೌಹಾರ್ದತೆಗಾಗಿ ಮನಸ್ಸುಗಳನ್ನು ಜೋಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಮಹಿಳಾ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ ನ ಸಂಚಾಲಕರು, ಪ್ರಾದ್ಯಾಪಕರೂ ಆದ ಡಾ. ವಿನಯ ನಾಯಕ ಪ್ರಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ನೆಟ್ಟಿನಲ್ಲಿ ಈ ಸರ್ಟಿಫಿಕೇಟ್ ಕೋರ್ಸ್ ಅನ್ನ ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳ ಉತ್ಸಾಹ ಮತ್ತು ಅವರ ಮಾತುಗಳನ್ನು ಕೇಳಿದರೆ ಈ ಕೋರ್ಸ್ ಯಶಸ್ವಿಯಾಗಿದೆ ಎಂದರು.

ಕಾಲೇಜಿನ ಪ್ರಾಧ್ಯಾಪಕ ಡಾ. ಎಂ .ಎನ್. ಜಂಗುಬಾಯಿ , ಮಂಜುನಾಥ್ ಚಲವಾದಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸರ್ಟಿಫಿಕೆಥ್ ಕೋರ್ಸ್ ವಿಚಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು . ಕಾವ್ಯಾ ಭಟ್ ಪ್ರಾರ್ಥಿಸಿದರು ಮಂಜುಶ್ರೀ ಕಾಂಬಳೆ ಸ್ವಾಗತಿಸಿದರು ಸರಿತಾ ನಂದಿ ಪರಿಚಯ ಮಾಡಿದರು ಗೌತಮಿ ಗೌಡರ್ ವರದಿ ವಾಚಿಸಿದರು. ಅಕ್ಷತಾ ಘೋಟ್ನೇಕರ್ ವಂದಿಸಿದರು . ಸುಶ್ಮಿತಾ ಹಾಗೂ ಪಿ. ಭಾರ್ಗವಿ ನಿರೂಪಿಸಿದರು.

https://odanadi.com/wp-content/uploads/2023/07/WhatsApp-Video-2023-07-06-at-1.27.35-PM.mp4
Exit mobile version