ಜೋಯಿಡಾದ ಪಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿ ನಡೆಸುತ್ತಿದ್ದ ಪ್ರವಾಸಿಗರಿಗೆ ಸೋಮವಾರ ಹುಲಿರಾಯ ಪ್ರತ್ಯಕ್ಷನಾಗಿದ್ದು, ಪ್ರವಾಸಿಗರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ಪಣಸೋಲಿಗೆ ಸಾಗಿ ಅಲ್ಲಿಂದ ನಡೆಯಲ್ಪಡುವ ಜಂಗಲ್ ಸಫಾರಿಯ ಸಂದರ್ಭದಲ್ಲಿ ನವಿಲು, ಜಿಂಕೆ, ಕಾಡುಕೋಣದಂತಹ ಹಲವು ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆಗಾಗ ಅನೆ, ಕಪ್ಪು ಚಿರತೆಗಳ ದರ್ಶನವಾಗುವುದೂ ಉಂಟು. ಆದರೆ ಹುಲಿ ಕಾಣುವುದು ಬಹಳ ಅಪರೂಪ.
ಅದರೆ ಸೋಮವಾರ ಜಂಗಲ್ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಈ ಅಪರೂಪದ ಸನ್ನಿವೇಶ ಕಾಣಲು ಸಿಕ್ಕಿದೆ. ಜಂಗಲ್ ಸಫಾರಿಯ ದಾರಿಯಲ್ಲಿ ಹುಲಿಯನ್ನು ಕಂಡ ಪ್ರವಾಸಿಗರು ಭಯಗೊಳ್ಳುವ ಜೊತೆಗೆ ಜೀವಂತ ಹುಲಿಯನ್ನುಕಂಡು ಖುಶಿಗೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಓರ್ವ ಪ್ರವಾಸಿಗ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು’ ಇದೀಗ ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ.
ವಿಡಿಯೋ ವೀಕ್ಷಿಸಿ...