Site icon ಒಡನಾಡಿ

ಬೊಮ್ಮಾಯಿ ಸಚಿವ ಸಂಪುಟದಲ್ಲಿ ಶಿವರಾಂ ಹೆಬ್ಬಾರರಿಗೆ ಒಲಿದ ಸಚಿವ ಸ್ಥಾನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಶಿವರಾಂ ಹೆಬ್ಬಾರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಸಚಿವ ಸಂಪುಟದಲ್ಲಿ ಮಂತ್ರಿಯಾಗುವುದು ಖಾತ್ರಿಯಾಗಿದ್ದು, ಈ ಬಗ್ಗೆ ಅವರೇ ತಮ್ಮ ಪೇಸ್ಬುಕ್, ವಾಟ್ಸೆಪ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಶಿವರಾಮ ಹೆಬ್ಬಾರವರು ಯಡಿಯೂರಪ್ಪ ಸರಕಾರದಲ್ಲಿ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದರು. ಇದು ಅವರ ಎರಡನೆ ಅವಧಿಯ ಸಚಿವ ಪದವಿಯಾಗಿದೆ. ಈ ಬಾರಿ ಉತ್ತರ ಕನ್ನಡ ಜಿಲ್ಲೆಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಕೂಡಾ ಸಚಿವ ಸ್ಥಾನಕ್ಕೆ ಬಹಳ ಪ್ರಯತ್ನ ನಡೆಸಿದ್ದರು ಎಂಬ ಮಾತು ಕೈಳಿ ಬಂದಿತ್ರು. ಆದರೆ ಭಾ.ಜ.ಪ. ಕಾಂಗ್ವರೆಸ್ ನಿಂದ ವಲಸೆ ಬಂದು ಸರಕಾರ ರಚನೆಗೆ ಕಾರಣರಾದವರನ್ನು ಕೈಬಿಡದೇ ಸಚಿವ ಹುದ್ದೆ ನೀಡಿ ಮಾತು ಉಳಿಸಿ ಕೊಂಡಿದೆ.

ಶಿವರಾಮ ಹೆಬ್ಬಾರವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಸಚಿವ ಹುದ್ದೆ ಖಚಿತವಾಗಿರುವ ಬಗ್ಗೆ ಹೆಬ್ಬಾರವರೇ ಬರೆದುಕೊಂಡಿರುವ ಸಾಲುಗಳನ್ನು ಇಲ್ಲಿ ನೀಡಲಾಗಿದೆ ನೋಡಿ….

ಆತ್ಮೀಯ ಮತದಾರ ಬಂಧುಗಳೇ !!!

ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ಈಗಷ್ಟೇ ದೂರವಾಣಿ ಮೂಲಕವಾಗಿ ಕರೆ ಮಾಡಿ ನನಗೆ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಆಹ್ವಾನಿಸಿರುವುದನ್ನು ನಿಮ್ಮ ಮುಂದೆ ಹಂಚಿಕೊಳ್ಳುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ.

ಕಳೆದ 1 ವರ್ಷ 5 ತಿಂಗಳ ಕಾಲ ರಾಜ್ಯದ ಕಾರ್ಮಿಕ ಖಾತೆ ಸಚಿವನಾಗಿ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕೊಟ್ಟ ಜವಾಬ್ದಾರಿಯನ್ನು ಶೃಧ್ದೆಯಿಂದ ನಿರ್ವಹಿಸಿ, ರಾಜ್ಯಾದ್ಯಂತ ಪ್ರವಾಸಮಾಡಿ ಶ್ರಮಿಕ ವರ್ಗಗಳ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ, ನನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದೆನೆ ಮುಂದೆಯೂ ಸಹ ಕ್ಷೇತ್ರದ, ರಾಜ್ಯದ ಜನತೆಗೆ ಯಾವುದೇ ಚ್ಯುತಿ ಬರದಂತೆ ಕಾರ್ಯನಿರ್ವಹಿಸುತ್ತೆನೆ.

ನನಗೆ ಮತ್ತೊಮ್ಮೆ ಸಚಿವ ಸ್ಥಾನ ಲಭಿಸಲು ಮೂಲ ಕಾರಣಿಕರರ್ತರಾದ ಯಲ್ಲಾಪುರ-ಮುಂಡಗೋಡ-ಬನವಾಸಿ ವಿಧಾನಸಭಾ ಕ್ಷೇತ್ರದ ಮಹಾ ಜನತೆಗೆ, ನನ್ನ ಮೇಲೆ ನಂಬಿಕೆ ಇಟ್ಟು ಮತ್ತೊಮ್ಮೆ ರಾಜ್ಯ ಜನತೆಯ ಸೇವೆ ಮಾಡುವುದಕ್ಕೆ ಅವಕಾಶ ಕಲ್ಪಸಿದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ರಾಜ್ಯ, ಮತ್ತು ಕೇಂದ್ರದ ಎಲ್ಲಾ ನಾಯಕರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೆನೆ.

ಶ್ರೀ ಶಿವರಾಮ ಹೆಬ್ಬಾರ್
ಶಾಸಕರು ಯಲ್ಲಾಪುರ ವಿಧಾನಸಭಾ ಕ್ಷೇತ್ರ

Exit mobile version