Site icon ಒಡನಾಡಿ

ದಾಂಡೇಲಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ದೇಶಪಾಂಡೆ

ಕಳೆದೆರಡು ದಿನಗಳ ಹಿಂದೆ  ಎಡಬಿಡದೇ ಸುರಿದ ಮಳೆ ಹಾಗೂ ತುಂಬಿ ಹರಿದ ಕಾಳಿ ನದಿಯಿಂದ ಹಾನಿಗೊಳಗಾದ ದಾಂಡೇಲಿಯ ಹಲವು ಸ್ಥಳಗಳಿಗೆ ರವಿವಾರ ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳ ಜೊತೆಯಲ್ಲಿ ಬೇಟಿ ನೀಡಿ ಪರಿಶೀಲಿಸಿದರು.

  ತುಂಬಿ ಹರಿದ ಆಲೂರು ಕೆರೆ, ಕೆರವಾಡಾ ಕೆರೆಗಳನ್ನು ವೀಕ್ಷಿಸಿದ ಆರ್.ವಿ ದೇಶಪಾಂಡೆಯವರು ದಾಂಡೇಲಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಅದರ ಪಕ್ಕದಲ್ಲೇ ನಿರ್ಮಾಣಗೊಂಡಿರುವ ಮೊಸಳೆ ಪಾರ್ಕನ ಕಾಮಗಾರಿಯನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ನದಿಯ ನಡುವಿನ ದಿಬ್ಬದಲ್ಲಿ ಮೊಸಳೆಗಳ ಗುಂಪು ಇರುವುದನ್ನು ಕಂಡು ಖೂಶಿಗೊಂಡರು.  ಹಾಲಮಡ್ಡಿಯಲ್ಲಿ ಮಳೆಯಿಂದ ಹಾನಿಗಗಾದ ಅಂಗನವಾಡಿ ಕಟ್ಟಡ ಪರಿಶೀಲಿಸಿ ತಕ್ಷಣ ದುರಸ್ಥಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಹಾಲಮಡ್ಡಿಯಲ್ಲಿ ನೀರು ನುಗ್ಗಿ ಹಾನಿಗೊಳಗಾದ 26 ಮನೆಗಳಳನ್ನು ವೀಕ್ಷಿಸಿ, ಸಂತ್ರಸ್ಥರಿಗೆ ಸಮಸ್ಯೆಯಾಗದ ಹಾಗೆ ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

  ತದನಂತÀರ ಹಳೆದಾಂಡೇಲಿ ಬಳಿ ಕಾಳಿ ನದಿ ದಂಡೆಯಲ್ಲಿ ನಿರ್ಮಾಣ ಹಂತದಲ್ಲಿದ್ದು ಕಳೆದೆರಡು ವರ್ಷಗಳಿಂದ ಪ್ರವಾಹದಲ್ಲಿ ಮುಳುಗಿ ಹಾನಿಗಳಗಾಗುತ್ತಿರುವ ಕಾಳಿ ರಿವರ್ ಪಾರ್ಕ ಸ್ಥಳವನ್ನು ವೀಕ್ಷಿಸಿ, ಮುಂದಿನ ಮಳೆಯಲ್ಲಿ ಹಾಗೂ ಪ್ರವಾಹದ ಸಂದರ್ಭದಲ್ಲಿ ಈ ಗಾರ್ಡನಗೆ ಯಾವುದೇ ದಕ್ಕೆಯಾದ ರೀತಿಯಲ್ಲಿ ಕೆಲಸ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.  ಹಾಗೂ ತಾನು ಪ್ರವಾಸೋದ್ಯಮ ಸಚಿವನಿದ್ದಾಗ ಈ ಕೆಲಸ ಮಂಜೂರಿ ಮಾಡಿದ್ದೆ . ಇಷ್ಟು ವಿಳಂಬವಾಗಿದು ಸರಿಯಲ್ಲ ಕೆಲಸವನ್ನು ಬೇಗ ಮುಗಿಸಲು ಹೇಳಿರುವೆ ಎಂದ ಆರ್.ವಿ. ದೇಶಪಾಂಡೆಯವರು  ಕಾಳಿ ನದಿ ನೀರು ಎಷ್ಟರವರೆಗೆ ತುಂಬಿ ಹರಿದಿತ್ತು ಎಂಬ ಬಗ್ಗೆ ಮಾಹಿತಿ ಪಡೆದರು.

ಶಾಸಕ ದೇಶಪಾಂಡೆಯವರ ಭೇಟಿಯ ವಿಡಿಯೋ ನೋಡಿ…

  ನಂತರ ಬೈಲಪಾರಗೆ ಭೇಟಿ ನೀಡಿ, ಅಲ್ಲಿಂದ ಐ.ಪಿ.ಎಮ್. ಜನವಸತಿ ಪ್ರದೇಶಕ್ಕೆ ಸಾಗುವ ಕಿರು ಸೇತುವೆಯೊಂದು ಹೊಳೆಯಿಂದ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿ ಪಡೆದರಲ್ಲದೇ, ಇದರಿಂದ ಸ್ಥಳೀಯರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಖೇದ ವ್ಯಕ್ತಪಡಿಸಿದರು. ಹಾಗೂ ತಕ್ಷಣ ಈ ಸೇತುವಯನ್ನು ಮರು ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳುವವ ಬಗ್ಗೆ ಸ್ಥಳದಲ್ಲಿದ್ದ ಜನರಿಗೆ ಭರವಸೆ ನೀಡಿದರು. ತಕ್ಷಣ ಈ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸುವಂತೆ ಅಧಿಕಾರಗಳಿಗೂ ಸೂಚಿಸಿದರು. 

  ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ,  ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಹಾಗೂ ನಗರಸಭಾ ಸದಸ್ಯರು,  ಜಿ.ಪಂ ಮಾಜಿ ಸದಸ್ಯ ಕೃಷ್ಣಾ ಪಾಟೀಲ, ತಾ.ಪಂ ಆಜಿ ಸದಸ್ಯ ಬಾಳು ಪಾಟೀಲ, ಅಂಬೇವಾಡಿ, ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಶ ಕೊರವೇಕರ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್. ಹೆಗಡೆ,  ಪ್ರಮುಖರಾದ ಮುನ್ನಾ ವಹಾಬ್,  ತಸವರ ಸೌದಾಗರ, ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ ಹಾಗೂ ಲೋಕೋಪಯೋಗಿ  ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

     ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ. ದೇಶಪಾಂಡೆಯವರು  ಅತಿವೃಷ್ಠಿಯಿದಾಗಿ ಹಳಿಯಾಳ-ದಾಂಡೇಲಿ-ಜೋಯಿಡಾದಲ್ಲಿ ಬಹಳಷ್ಟು ಹಾನಿಯಾಗಿದೆ. ಈಗಾಗಲೇ ಹಳಿಯಾಳ ಹಾಗೂ ದಾಂಡೇಲಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಂತ್ರಸ್ಥರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.  ಹಾಗೂ ಮಳೆ ಹಾಗೂ ಹೊಳೆಯಿಂದ ಹಾನಿಗೊಳಗಾದ ಸ್ಥಳಗಳು ದುರಸ್ಥಿಗೆ ಹಾಗೂ  ಅಭಿವೃದ್ದಿ ಕೆಲಸಗಳನ್ನು ತ್ವರಿತ ಗರಿತಯಲ್ಲಿ ಪೂರ್ಣಗೊಳಿಸುವಂತೆಯೂ ನಿರ್ದೇಶಿಸಿದ್ದೇನೆ ಎಂದರು.

Exit mobile version