ಶಿರಸಿ,: ” ಜಿಂಕೆಯೊಂದು ಬೇಟೆಗಾರನಿಂದ ತಪ್ಪಿಸಿಕೊಂಡು ಸನ್ಯಾಸಿಯೊಬ್ಬನ ಎದುರಿನಿಂದ ಹಾದು ಓಡಿಹೋಗಿತ್ತು. ಹಾಗೆ ಹಾದು ಹೋದ ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿರುತ್ತಾನೆ. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಆ ಜಿಂಕೆಯ ಸಾವಿಗೆ ಕಾರಣವಾದಂತಾಗುತ್ತದೆ, ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಯದ್ದಾಗಿರುತ್ತದೆ….”
ಇದು ಶಿರಸಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳಿದ ಕಥೆಯಾಗಿತ್ತು. ಪತ್ರಕರ್ತರು ಸದ್ಯದ ರಾಜಕೀಯ ಬಳವಣಿಗೆಯ ಬಗ್ಗೆ ಕೇಳಿದಾಗ ಅವರು ಈ ಕಥೆ ಹೇಳಿದರು. ಈ ಕಥೆಯ ಮೂಲಕ ತಮ್ಮ ಸಂದಿಗ್ದತೆಯನ್ನೂ ಹೇಳಿಕೊಂಡರೆಂದೇ ಬಾವಿಸಲಾಗಿದೆ. ಕಂತೆಯ ಮುಂದುವರೆದು ಹೇಳಿದ ಅವರು ಇದೇ ವಿಚಾರದಿಂದ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ ಸದ್ಯವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ. ಯಾವ ರೀತಿಯ ಸುಖಾಂತ್ಯ ಎಂದು ಹೇಳಲು ಸಾಧ್ಯವಿಲ್ಲ,” ಎಂದ ಶ್ರೀಗಳು ರಾಜ್ಯದಲ್ಲಿ ಪ್ರಸ್ತುತ ಎದ್ದಿರುವ ರಾಜಕೀಯ ಸಂಘರ್ಷ ಸುಖಾಂತ್ಯ ಕಾಣಲಿದೆ ಎಂದರು.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಈಚಲು ಬೆಟ್ಟದಲ್ಲಿ ಭೂದೇವಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು “ನವೆಂಬರ್‌ನಿಂದ ಮುಂದಿನ ಸಂಕ್ರಾಂತಿ ನಡುವೆ ರಾಷ್ಟ್ರಮಟ್ಟದಲ್ಲಿ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸಲಿದೆ,” ಎಂದರು.
“ಆಗಸ್ಟ್ ಮೂರನೇ ವಾರದಿಂದ ರೋಗ- ರುಜಿನಗಳು ಹೆಚ್ಚಉವ ಸಾಧ್ಯತೆಯಿದೆ. ಜನವರಿಯವರೆಗೂ ರೋಗ ಬಾಧೆ ಇರಲಿದೆ. ಕೊರೊನಾ ಇದು ಸಾಯುವ ಖಾಯಿಲೆಯಲ್ಲ. ಆದರೆ ಜನರು ಭೀತಿಯಿಂದ ಸಾಯುತ್ತಿದ್ದಾರೆ ಹೊರತು, ಕಾಯಿಲೆಯಿಂದ ಸಾಯುತ್ತಿಲ್ಲ,” ಎಂದ ಶ್ರೀಗಳು ಕೊರೊನಾ ಮತ್ತೆ ಹೆಚ್ಚುವ ಸಾದ್ಯತೆಯಿದೆ ಎಂಬ ಬಗ್ಗೆಯೂ ಭವಿಷ್ಯ ನುಡಿದರು.
ಶ್ರೀಗಳ ಮಾತು ಕೇಳಿ….