Site icon ಒಡನಾಡಿ

ಮುಚ್ಚಳಿಕೆ, ಶರತ್ತುಗಳೊಂದಿಗೆ ಪುನರಾರಂಭಗೊಂಡ ಕಾಳಿ ವೈಟ್‍ ವಾಟರ್ ರಾಪ್ಟಿಂಗ್‍ : ಪ್ರವಾಸೋದ್ಯಮಿಗಳು, ಪ್ರವಾಸಿಗರಲ್ಲಿ ಹರ್ಷ …

ಕೊರೊನಾ ಇಳಿಕೆಯಾದ ನಂತರ ಪರವಾನಿಗೆಯಿಲ್ಲದೇ ಗಣೇಶಗುಡಿಯ ಕಾಳಿನದಿಯಲ್ಲಿ ಆರಂಭವಾಗಿದ್ದ ರ್ಯಾಪ್ಟಿಂಗ್ ಹಾಗೂ ಇತರೆ ಜಲ ಸಾಹಸ ಕ್ರೀಡೆಗಳಿಗಳಗೆ ಕಡಿವಾಣ ಹಾಕಿದ್ದ ಜಿಲ್ಲಾಡಳಿತ ಇದೀಗ ಸ್ಥಳೀಯ ಪ್ರವಾಸೋದ್ಯದ ಅನುಕೂಲತೆಗಾಗಿ ಮಾಲಕರಿಂದ ನಿಯಮ ಪಾಲನೆಯ ಮುಚ್ಚಳಿಕೆ ಪತ್ರ ಪಡೆದು ಕೆಲವು ಶರತ್ತುಗಳನ್ನು ವಿಧಿಸಿ ಜಲ ಸಾಹಸ ಕ್ರೀಡೆಗಳಗೆ ಸಮ್ಮತಿಸಿದೆ. ರವಿವಾರದಿಂದಲೇ ಈ ಜಲ ಸಾಹಸ ಕ್ರೀಡೆಗಳು ಆರಂಭವಾಗಿವೆ.

ಕೊರೊನಾ ಮೊದಲ ಅವಧಿಯಲ್ಲಿಯೂ ರ್ಯಾಪ್ಟಿಂಗ್ ಸ್ಥಗಿತವಾಗಿತ್ತು. ರೆಸಾರ್ಟಗಳು ಬಂದ್ ಆಗಿದ್ದವು. ಸ್ಥಳೀಯ ಪ್ರವಾಸೋದ್ಯಮದ ಮೇಲೆ ಸಾಕಷ್ಟು ಹಿನ್ನಡೆಯಾಗಿತ್ತು. ಕೊರೊನಾ ಎರಡನೆಯಯ ಅಲೆಯಲ್ಲಿಯೂ ಇದೇ ಸ್ಥಿತಿಯೊಯಾಗಿತ್ತು. ಕಳೆದ ಎಪ್ರಿಲ್ ತಿಂಗಳಲಿ ಲಾಕ್‍ಡೌನ್ ಜಾರಿಯಾಗುತ್ತಿದ್ದಂತೆಯೇ ಹೋಮ್‍ಸ್ಟೇ ರೆಸರ್ಟಗಳನ್ನು ಸ್ಥಗಿತಗೊಳಿಸಲಾಗಿತ್ತು. ಜೊತೆ ಜೊತೆಗೆ ಪ್ರವಸೋದ್ಯಮದ ಭಾಗಗವಾಗಿದ್ದ ರ್ಯಾಪ್ಟಿಂಗ್ ಹಾಗೂ ಎಲ್ಲ ವಾಟರ ಎಕ್ಟಿವಿಟಸ್‍ಗಳನ್ನೂ ಸಹ ಸ್ಥಗಿತಗೊಳಿಲಾಗಿತ್ತು.
ಕೋವಿಡ್ ಎರಡನೆ ಅಲೆ ಒಂದಿಷ್ಟು ಇಳಿಕೆಯಾಗುತ್ತಿದ್ದಂತೆ ರೆಸಾರ್ಟ, ಹೋಮ್ ಸ್ಟೇಗಳನ್ನು ಶೇ. 50 ರ ಪ್ರಮಾಣದಲ್ಲಿ ಆರಂಭಿಸಲು ಆಡಳಿತ ಸಮ್ಮತಿ ನೀಡಿತ್ತಾದರೂ ರ್ಯಾಪ್ಟಿಂಗ್ ಹಾಗೂ ಇತರೆ ಜಲ ಕ್ರೀಡೆ ನಡೆಸಲು ಪರವಾನಿಗೆ ನೀಡಿರಲಿಲ್ಲ.

ಇದೀಗ ಜಿಲ್ಲಾಡಳಿತದ ನಿರ್ದೇಶನದಂತೆ ಜೋಯಿಡಾ ತಹಶಿಲ್ದಾರರು ಜಲ ಸಾಹಸ ಕ್ರೀಡೆ ನಡೆಸುವ ಎಲ್ಲ ಸಂಸ್ಥೆಯ ಮಾಲಕರಿಂದ ನಿಯಮ ಪಾಲನೆಯ ಕರಾರು ಪತ್ರ ಬರೆಯಿಸಿಕೊಂಡಿದ್ದು, ರ್ಯಾಪ್ಟಿಂಗ್ ಹಾಗೂ ಇತರೆ ಜಲ ಸಾಹಸ ಕ್ರೀಡೆಗಳಿಗೆ ಬರುವ ಪ್ರವಾಸಿಗರ ಕೋವಿಡ್ ಟೆಸ್ಟ್ ಹಾಗೂ ನೆಗೆಟಿವ್ ವರದಿ ಕಡ್ಡಾಯವಾಗಿರಬೇಕು. ಟೆಸ್ಟ್ ಆಗದವರಿದ್ದರೆ ಸ್ಥಳದಲ್ಲೇ ರ್ಯಾಟ್ ಟೆಸ್ಟ್ ಮಾಡಿಸಬಕು. ಒಂದು ಬೋಟ್‍ನಲ್ಲಿ 6-8 ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಬೇಕು. ಕೋವಿಡ್ ನಿಯಮ ಪಾಲಿಸಬೇಕು ಎಂಬ ಹಲವು ಶರತ್ತುಗಳನ್ನು ಹಾಕಿ ರ್ಯಾಪ್ಟಿಂಗ್ ನಡೆಸಲು ಸಮ್ಮತಿಸಿದ್ದಾರೆ. ಅದರ ಭಾಗವಾಗಿ ರವಿವಾರದಿಂದಲೇ ಗಣೇಶಗುಡಿಯಲ್ಲಿ ರ್ಯಾಪ್ಟಿಂಗ್ ಹಾಗೂ ಇತರೆ ಜಲಸಾಹಸ ಕ್ರೀಡೆಗಳು ಆರಂಭವಾಗಿವೆ. ಇದು ದಾಂಡೇಲಿ-ಜೋಯಿಡಾದ ಪ್ರವಾಸೋದ್ಯಮಿಗಳಲ್ಲಿ ಸಂತಸ ಮೂಡಿಸಿದ್ದು, ಪ್ರವಾಸಿಗಿರಿಗೂ ಖುಸಿ ಕೊಟ್ಟಿದೆ. ವೀಕೆಂಡ್‍ನಲ್ಲಿ ಪ್ರವಾಸಿಗರು ರ್ಯಾಪ್ಟಿಂಗ್ ನಡೆಸಿ ಸಂಭ್ರಮಿಸಿದ್ದಾರೆ. ಈ ಬೆಳವಣಿಗೆ ಪ್ರವಾಸೋದ್ಯಮದ ಚೇತರಿಕೆಗೆ ಸಹಾಯಕವಾಗಲಿದೆ ಎಂದೇ ಹೇಳಲಾಗುತ್ತಿದೆ. ಆದರೆ ಕೋವಿಡ್ ಜಾಗೃತಿಯಿರಲಿ, ಹೊರ ರಾಜುದಿಂದ ಬರುವ ಪ್ರವಾಸಿಗರ ಬಗ್ಗೆ ಕಾಳಜಿಯಿರಲಿ ಎಂಬುದೇ ಎಲ್ಲರ ಕಾಳಜಿಯ ಆಶಯವಾಗಿದೆ.

ಈ ಬಗ್ಗೆ ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆಯವರನ್ನು ವಿಚಾರಿಸಿದಾಗ ಅವರು ರ್ಯಾಪ್ಟಿಂಗ್ ಹಾಗೂ ಜಲ ಸಾಹಸ ಕ್ರೀಡೆ ನಡೆಸುವ ಮಾಲಕರಿಂದ ಆಪಡಿವೆಟ್ ಬರೆಯಿಸಿಕೊಳ್ಳಲಾಗಿದೆ. ಕೆಲವು ಶರತ್ತು ವಿಧಿಸಿ ರ್ಯಾಪ್ಟಿಂಗ್ ನಡೆಸಲು ಸಮ್ಮತಿಸಲಾಗಿದೆ. ಜೊತೆಗೆ ಗ್ರಾ,ಪಂ . ಅಭಿವೃದ್ದಿ ಅಧಿಕಾರಿಗಳನ್ನು ನೊಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಕಾಲ ಕಾಲಕ್ಕೆ ಮಾಹಿತಿ ಪಡೆಯಲಾಗುತ್ತದೆ. ನಿಯಮ ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.

ರೆಪ್ಟಿಂಗ್ ನ ಸುಂದರ ವಿಡಿಯೋ ನಿಮಗಾಗಿ….

Exit mobile version