Site icon ಒಡನಾಡಿ

ಕಾಗದ ಕಾರ್ಮಿಕರ ಧರಣಿ: ಸಂಧಾನಕ್ಕೆ ಆಹ್ವಾನಿಸಿದ ಕಾರ್ಮಿಕ ಇಲಾಖೆ


ವೇತನ ಪರಿಷ್ಕರಣೆಗೆ ಕಾಗದ ಕಂಪನಿ ವಿಳಂಬ ನೀತಿ ಅನುರಿಸುತ್ತಿದೆ ಎಂದು ಆಕ್ಷೇಪಿಸಿ ಕಾರ್ಮಿಕರ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತರು ಜುಲೈ 22 ರಂದು ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಮದ್ಯಸ್ಥಿಕಾ (ಸಂಧಾನ) ಸಭೆಯನ್ನು ಕರೆದಿದ್ದಾರೆ.


ಜಂಟಿ ಸಂಧಾನ ಸಮಿತಿಯ ಪ್ರತಿಭಟನೆಯ ವಿಷಯವನ್ನು ಕೈಗಾರಿಕಾ ವಿವಾದವಾಗಿ ಪರಿಗಣಿಸಿ, ಕೈಗಾರಿಕಾ ವಿವಾದ ಕಾಯ್ದೆ 1947ರ ಕಲಂ 12(1) ರ ಅಡಿಯಲ್ಲಿ ಸಂಧಾನಾಧಿಕಾರಿಗಳ ಮದ್ಯಸ್ಥಿಕೆ ಅವಶ್ಯವೆಂದು ತಿಳಿದು ಕಂಪನಿಯ ಆಡಳಿತ ವರ್ಗ ಹಾಗೂ ಜಮಟಿ ಸಂಧಾನ ಸಮಿತಿಯ ನಡುವೆ ಈ ರಾಜೀ ಸಂಧಾನ ಸಭೆಯನ್ನು ನಿಗದಿ ಪಡಿಸಲಾಗಿದ್ದು, ಈ ಸಭೆಯಲ್ಲಿ ಉಭಯ ಪಕ್ಷಗಳು ಖುದ್ದಾಗಿ ಮಾಹಿತಿಯೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ.


ಇದರ ಜೊತೆಗೆ ಸಭೆಗೆ ಮುಂಚಿತವಾಗಿ ಆಡಳಿತವರ್ಗದವರು ಜಂಟಿ ಸಂಧಾನ ಸಮಿತಿಯ ಜೊತೆ ಸಭೆ ನಡೆಸಿ ಧರಣಿ ಅಂತ್ಯಗೊಳಿಸಲು ಕ್ರಮ ಕೈಗೊಳ್ಳುವಂತೆಯೂ ಹಾಗೂ ಹಾಗೂ ಕೈಗಾರಿಕಾ ವಿವಾದದ ಬಗ್ಗೆ ಕಾರ್ಮಿಕ ಆಯುಕ್ತರು ಸಂಧಾನ ಸಭೆಯನ್ನು ನಿಗದಿ ಪಡಿಸಿರುವುದರಿಂದ ಜಂಟಿ ಸಂಧಾನ ಸಮಿತಿಯವರೂ ಕೂಡಾ ತಕ್ಷಣ ತಮ್ಮ ಪ್ರತಿಭಟನೆÀಯನ್ನು ಹಿಂಪಡೆಯಬೇಕೆಂದೂ ಪತ್ರದಲ್ಲಿ ಕಾರ್ಮಿಕ ಆಯುಕ್ತರು ಸೂಚಿಸಿದ್ದಾರೆ.

Exit mobile version