ದಾಂಡೇಲಿ: ಕೋವಿಡ್ ಎರಡನೇ ಅಲೆಗೆ ದಾಂಡೇಲಿಯಲ್ಲಿ (ಸರಕಾರಿ ಆಸ್ಪತ್ರೆಯಲ್ಲಿ) ಒಟ್ಟೂ 15 ಜೀವ ಬಲಿಯಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಬುಧವಾರ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ದಾಖಲಾಗಿದೆ.
ದಾಂಡೇಲಿಯಲ್ಲಿ ಕೊರೊನಾ ಎರಡನೇ ಅಲೆ ಅಲೆ ಆತಂಕಕಾರಿಯಾಗಿ ಹರಡುತ್ತಿದೆ. ಇತ್ತೀಚಿನ ದಿನಗಳಲ್ಲಿ ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ದಿನಕ್ಕೆ ಒಬ್ಬರು’ , ಇಬ್ಬರಂತೆ ಸಾವನ್ನಪ್ಪುತ್ತಿದ್ದಾರೆ. ಬುಧವಾರವೂ ಮೂವರು ಕೊರೊನಾಕ್ಕೆ ಬಲಿಯಾಗಿದ್ದಾರೆ.
ಇದಲ್ಲದೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಬೇರೆ ಮಹಾ ನಗರಗಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವರ ಲೆಕ್ಕ ಬೇರೆ ಇದೆ ಎನ್ನಲಾಗಿದ್ದು’ ಇವು ಸೇರಿದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂಬ ಮಾಹಿತಿಯಿದೆ.
ಹೆಚ್ಚುತ್ತಿರುವ ಸೋಂಕು ಮತ್ತು ಸಾವು ದಾಂಡೇಲಿಗರನ್ನು ಆತಂಕಕ್ಕೆಡೆ ಮಾಡಿದೆ.
