ದಾಂಡೇಲಿ: ತನ್ನದೇ ಆದ ಸಣ್ಣದೊಂದು ವ್ಯಾಪಾರೋದ್ಯಮ ಮಾಡಿಕೊಂಡಿರುವ ದಾಂಡೇಲಿಯ ಕೋಗಿಲಬನದ ಯುವಕ ಚನ್ನಬಸಪ್ಪ ಮುರಗೋಡ ಕೊರೊನಾ ವಾರಿಯರ್ಸಗಳ ಜಲದಾಹ ತಣಿಸುವ ತನ್ನ ಸೇವಾ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ.
ನೆರೆಹಾವಳಿ ಬಂದಾಗ, ಅಪಘಾತ ಸಂಭವಿಸಿದಾಗ ಅಥವ ಇನ್ಯವುದೇ ಕಷ್ಠದ ಸಮಯವಿದ್ದಾಗ ಸ್ವಯಂ ಪ್ರೇರಣೆಯಿಂದ ಧಾವಿಸವ ಚನ್ನಬಸಪ್ಪ ಮುರಗೋಡ ತನ್ನ ಕೈಲಾದ ಸಹಾಯವನ್ನು ಅಸಹಾಯಕರಗೆ ಮಾಡುತ್ತ ಬಂದವರು. ಕಳೆದ ವರ್ಷ ಕೊರೊನಾ ಲಗ್ಗೆಯಿಟ್ಟಾಗಲೂ, ಲಾಕ್‍ಡೌನ್ ಸಂದರ್ಭಲ್ಲಿ ದಾಂಡೇಲಿಯಲ್ಲಿ ಹಲವಾರು ಜನರಿಗೆ ಕುಡಿಯುವ ನೀರು ಹಾಗೂ ತಂಪು ಪಾನೀಯ ವಿತರಿಸಿದ ಚನ್ನಬಸಪ್ಪ ಇದೀಗ ಈ ಬಾರಿ ಮತ್ತೆ ಕೊರೊನಾ ಎರಡನೇ ಅಲೆಯ ಸಂದರ್ಭಲ್ಲಿ ಘೋಷಣೆಯಾದ ಜನತಾ ಕಪ್ರ್ಯು ಸಂದರ್ಭದಲ್ಲಿಯೂ ತಮ್ಮ ಸೇವಾ ಕಾರ್ಯ ಮುಂದವರೆಸಿದ್ದಾರೆ.
ಕೊರೊನಾ ವಾರಿಯರ್ಸಗಳಾಗಿ ಕೆಲಸ ಮಾಡುತ್ತಿರುವ ನಗರಸಭೆ, ಕಂದಾಯ, ಅರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ಕುಡಿಯುವ ನೀರನ್ನು ಉಚಿತವಾಗಿ ನೀಡುತ್ತಿರುವ ಚನ್ನಬಸಪ್ಪ ಮುರಗೋಡ, ಆ ಕಾಯಕದಲ್ಲಿಯೇ ಖುಷಿ ಕಾಣುತ್ತಿದ್ದಾರೆ. ಶುದ್ದ ಕುಡಿಯುವ ನೀರಿನ ವಿತರಕರಾಗಿರುವ ಮುರಗೋಡ ತನ್ನ ವ್ಯಪಾರಕ್ಕೆ ಎಂದು ತರಿಸಿದ್ದ ನೀರಿನ ಬಾಟಲಿಗಳನ್ನು ಇದಗ ಉಚಿತವಾಗಿ ಕೊರೊನಾ ವಾರಿಯರ್ಸಗೆ ವಿತರಿಸುತ್ತಿದ್ದಾರೆ.
ಯಾವುದೇ ಪ್ರಚಾರ ಬಯಸದೇ ಸೇವಾ ಕಾರ್ಯ ಮಾಡುತ್ತಿರುವ ಇವರನ್ನು ಮುಂಜಾವು ಕುತುಹಲದಿಂದ ಸಂಪರ್ಕಿಸಿದಾಗ. ದೇವರು ನನಗೆ ಒಂದಿಷ್ಟು ಕೊಟ್ಟಿದ್ದಾನೆ. ಅದರಲ್ಲಿ ಒಂದು ಭಾಗವನ್ನು ಈ ರೀತಿ ಸೇವೆ ಮಾಡುತ್ತಿದ್ದೇನೆ. ಇದರಲ್ಲಿ ನನ್ನದೇನೂ ಹೆಚ್ಚಿಲ್ಲ ಎನ್ನುವ ಚನ್ನಬಸಪ್ಪ ಮುರಗೋಡರವರು ನಿಜಕ್ಕೂ ಯುವ ಸಮೂಹಕ್ಕೊಂದು ಮಾದರಿ ವ್ಯಕ್ತಿಯಾಗಿದ್ದಾರೆ.