ದಾಂಡೇಲಿ : ಲಯನ್ಸ್ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ವಿಶ್ವದಲ್ಲೆ ಗುರುತಿಸಿಕೊಂಡ ಒಂದು ಅಂತರಾಷ್ಟ್ರೀಯ ಮಟ್ಟದ ಅತಿದೊಡ್ಡ ಸೇವಾ ಸಂಸ್ಥ್ಥೆಯಾಗಿದೆ, ಪರರಿಗೆ ಉಪಕಾರ ಮಾಡಿ ಸೇವೆ ಸಲ್ಲಿಸುವುದೇ ಈ ಸಂಸ್ಥೆಯ ಸದಸ್ಯರ ಮುಖ್ಯಗುರಿಯಾಗಿದೆ ಎಂದು ಜಿಲ್ಲೆಯ ಜೋನ್ ಚೇರಮನ್ ಜ್ಯೋತಿ ಭಟ್ ನುಡಿದರು.
ಅವರು ನಗರದ ಲಯನ್ಸ್ ಕ್ಲಬ್‍ನ ಶಾಲೆಯಲ್ಲಿ ನಡೆದ ಜೋನ್ ಚೆರಮನ್ನರ ಅಧಿಕೃತ ಬೇಟಿಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ರೀಜನ್ ಚೆರಮನ್ ಪ್ರೊ. ಸುರೇಶ ಮಾತನಾಡಿ ಸಮಾಜದಲ್ಲಿ ಬಡವರನ್ನು ಗುರುತಿಸಿ ಹಸಿವು ಮುಕ್ತರನ್ನಾಗಿ ಮಾಡಲು, ಕಿರಿಯ ವಯಸ್ಸಿನ ಮಕ್ಕಳಲ್ಲಿ ಕ್ಯಾನ್ಸರ ಲಕ್ಷಣ ಗುರುತಿಸಿ ಅಂಥವರನ್ನು ಗುಣ ಪಡೆಸುವ ನಿಟ್ಟಿನಲ್ಲಿ ಹೆಚ್ಚಿನ ಅದ್ಯತೆ ನೀಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು. ಕ್ಯಾಬಿನೇಟ್ ಸದಸ್ಯ ಶಾಂತಾರಾಮ ನಾಯ್ಕ್ ಲಯನ್ಸ್ ನ ಎಲ್.ಸಿ.ಐ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ಜ್ಯೋತಿ ಭಟ್ ಬಸ್ ಪ್ರಯಾಣ ಮಾಡುವ ವಿಶೇಷಚೇತನರಿಗೆ ಅನುಕೂಲವಾಗುವ ಕುರ್ಚಿಯನ್ನು ನಗರದ ಕೆ.ಎಸ್.ಆರ್.ಟಿ.ಸಿ. ಯ ಪ್ರಭಾರಿ ಡಿಪೋ ಮ್ಯಾನೇಜರ್ ಸಂಗಮೇಶ ರವರಿಗೆ ದೇಣಿಗೆಯಾಗಿ ನೀಡಿದರು. ದಾಂಡೇಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಅನ್ನಪೂರ್ಣ ಬ್ಯಾಕೋಡ ಲಯನ್ಸ್‍ನ ಶಾಲೆಗೆ ಎರಡು ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರಗಳನ್ನು ಕೊಡುಗೆಯಾಗಿ ನೀಡಿದರು.
ದಾಂಡೇಲಿ ಲಯನ್ಸ್ ಕ್ಲಬ್‍ನ ಕಾರ್ಯದರ್ಶಿ ನಾಗರತ್ನ ಹೆಗಡೆ, ಖಜಾಂಚಿ ಲತಾ ಯು. ಶೆಟ್ಟಿ, ಯು.ಎಸ್.ಪಾಟೀಲ್, ಲಾರೇನ್ಸ್ ಡಿಸೋಜಾ, ಗೀತಾ ಅಶ್ವಿನ್‍ಕುಮಾರ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಎನ್.ಜಿ.ಬ್ಯಾಕೊಡ್, ವಿ.ಆರ್.ಹೆಗಡೆ, ಲತಾ ಪಾಟೀಲ್, ಅನಿಲ ದಂಡಗಲ್, ಮಾರತಿರಾವ್ ಮಾನೆ, ಚೇತನ ಕುಮಾರಮಠ, ಆಶ್ವಿನಕುಮಾರ, ವಿ.ಪಿ.ಜೋಶಿ, ಬಸಪ್ಪ ಕವಲಗಿ, ಉದಯಶೆಟ್ಟಿ, ಸೈಯದ್ ಇಸ್ಮಾಯಿಲ್, ಚೇತನಾ ಕುಮಾರಮಠ, ಗಜಾನನ ಕರಗಾಂವ್ಕರ, ಇಮ್ತಿಯಾಜ ಅತ್ತಾರ, ರವಿ ಪೈ, ಪಿ..ಕೆ. ಜೋಶಿ ಮುಂತಾದವರಿದ್ದರು.