ದಾಂಡೇಲಿ: ಹದಗೆಟ್ಟ ಅಂಬೇವಾಡಿ-ಮಾವಳಂಗಿ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಭಟನೆ ನಡೆಸಿದರು.
ಇದು ದಾಂಡೇಲಿಗೆ ಹತ್ತಿರದ ಮಾವಳಂಗಿ ಇಕೋ ಪಾರ್ಕ ಸಂಪರ್ಕಿಸುವ ರÀಸ್ತೆಯಾಗಿದ್ದು, ಇಲ್ಲಿ ಪ್ರವಾಸಿಗರ ಸಂಚಾರ ನಿತ್ಯ ಹೆಚ್ಚಿರುತ್ತದೆ. ಜೊತೆಗೆ ಅಂಬೇವಾಡಿ, ಗಾಂವಠಾಣ, ನವಗ್ರಾಮವ, ಮಾವಳಂಗಿಗೆ ಹೋಗಿ ಬರುವ ಪ್ರಮುಖ ರಸ್ತೆ ಇದಾಗಿದೆ. ಈ ರಸ್ತ ಬಹಳ ದಿನಗಳಿಂದ ಕೆಟ್ಟು ಹೋಗಿತ್ತು. ರಸ್ತೆ ದುರಸ್ತಿಪಡಿಸಲು ಸ್ಥಳೀಯರು ಮನವಿ ಮಾಡಿದ್ದರಾದರೂ ಪ್ರಯೋಜನವಾಗಿರಲಿಲ್ಲ.
ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಗ್ರಾಮೀಣ ಠಣೆಯ ಇ.ಎಸ್.ಐ ಸತ್ಯಪ್ಪ ಹುಕ್ಕೇರಿ ಸ್ಥಳಕ್ಕಾಗಮಿಸಿ ಗ್ರಾಮಸ್ಥರ ಮನವೊಲಿಸುವಂತೆ ಮನವರಿಕೆ ಮಾಡಿದರು. ನಂತರ ಗ್ರಾಮಸ್ಥರು ಪಿ.ಎಸ್.ಐ ಸತ್ಯಪ್ಪ ಹುಕ್ಕೇರಿಯವರಿಗೆ ಮನವಿ ನೀಡಿ ತಕ್ಷಣ ರಸ್ತೆ ರಿಪೇರಿ ನಡೆಸುವಂತೆಯೂ, ಅದಾಗದಿದ್ದಲ್ಲಿ ಮತ್ತೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದರು.
ಬಹಳ ತಿಗಳುಗಳಿಂದ ರಸ್ತೆ ಸಂರ್ಪೂಣ ಹಾಳಾಗಿ ಹೋಗಿದೆ. ರಸ್ತೆ ದುರಸ್ತಿ ಪಡಿಸುವಂತೆ ಸಂಬಂದಪಟ್ಟ ಇಲಾಖೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆ ಕಾರಣ ಇಂದು ರಸ್ತೆ ತಡೆ ನಡೆಸಿದ್ದೇವೆ. ಇನ್ನು 15 ದಿನಗಳ ಒಳಗೆ ಈ ರಸ್ತೆ ದುರಸ್ತಿ ಕಾರ್ಯ ನಡೆಯದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಪ್ರಮುಖರಾದ ಬಸವರಾಜ ಹುಂಡೇಕರ ಎಚ್ಚರಿಸಿದ್ದಾರೆ.
ಭಾ.ಜ.ಪ ಮುಖಂಡರಾದ ಸುಧಾಕರ ರೆಡ್ಡಿ, ಸ್ಥಳೀಯರಾದ ಬಸವರಾಜ ಹುಂಡೇಕರ, ಲಕ್ಷ್ಮಣ ನಾಯ್ಕ, ರಮೇಶ ಕಾಂಬಳೆ, ಧಾನೇಶ್ವರ ಪಾಟೀಲ, ವಿಷ್ಣು ಗಾಂವಕರ, ದಿಲಾವರ ಶೇಖ, ವಿಷ್ಣು ಜುಂಜವಾಡಕರ, ರಮೇಶ ಹುಣಸಿಮರದ, ಮುಬಾgಕÀ ಅಂಗಡಿ, ಅರ್ಜುನ ಭೋವಿವಡ್ಡರ ಮುಂತಾದವರಿದ್ದರು.