ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳಗುಳಿಯವರು
ರಾಣೆಬೆನ್ನೂರಿನ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭುಸ್ವಾಧೀನಾಧಿಕಾರಿಗಳಾಗಿ ಪದೋನ್ನತ್ತಿಗೊಂಡಿದ್ದಾರೆ.
ಸುಮಾರು ಆರು ವರ್ಷಗಳಿಂದ ಅವಿಭಜಿತ ಹಳಿಯಾಳ ತಾಲೂಕಾ ತಹಶೀಲ್ದಾರರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾಧರ ಗುಳಗುಳಿಯವರು ತಮ್ಮ ಸರಳ ವ್ಯಕ್ತಿತ್ವದ ಮೂಲಕ ಜನಪ್ರೀತಿ ಗಳಿಸಿದ್ದರು. ತಮ್ಮ ಕೆಲಸಗಳ ಮೂಲಕವೇ ತಾಲೂಕಿನ ಜನಮೆಚ್ಚುಗೆಯ ಅಧಿಕಾರಿಗಳೆನಿಸಿಕೊಂಡಿದ್ದರು.
ಕೆಲ ಕಾಲ ದಾಂಡೇಲಿ ನಗರಸಭೆಯ ಪೌರಾಯುಕ್ತ ಹುದ್ದೆಯ ಹೆಚ್ಚುವರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಇದೀಗ ಪದೋನ್ನತ್ತಿಗೊಂಡು ರಾಣೆಬೆನ್ನೂರಿಗೆ ವರ್ಗಾವಣೆಗೊಂಡಿದ್ದಾರೆ.