ದಾಂಡೇಲಿ ಪೊಲೀಸ್ ಉಪ ವಿಭಾಗದ ಅರಕ್ಷಕ ಉಪ ಅಧೀಕ್ಷಕರಾಗಿ (DYSP) ಪ್ರಶಾಂತ ಸಿದ್ದನಗೌಡರ ವರ್ಗಾವಣೆಗೊಂಡಿದ್ದಾರೆ.
ರಾಜ್ಯ ಗುಪ್ತ ವಾರ್ತೆಯಲ್ಲಿ ಡಿ.ಎಸ್.ಪಿ. ಯಾಗಿದ್ದ ಸಿದ್ದನಗೌಡರವರು ದಾಂಡೇಲಿಯ ಡಿ.ವೈ.ಎಸ್.ಪಿ. ಯಾಗಿ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಆರಕ್ಷಕ ಮಹಾ ನಿರ್ದೇಶಕರು ಬುಧವಾರ ಈ ಆದೇಶ ಹೊರಡಿಸಿದ್ದಾರೆ. ಹಿಂದೆ ಇವರು ಜೋಯಿಡಾ’ ಹಳಿಯಾಳ, ದಾಂಡೇಲಿಯಲ್ಲಿ CPI ಆಗಿ ಕಾರ್ಯನಿರ್ವಹಿಸಿದ್ದರು. ಪದೋನ್ನತ್ತಿಗೊಂಡಿದ್ದ ಇವರು ಸದ್ಯ ಬೆಂಗಳೂರಲ್ಲಿ ರಾಜ್ಯ ಗುಪ್ತ ವಾರ್ತೆಯಲ್ಲಿದ್ದರು.
ಶಿರಸಿ DYSP ಗೋಪಾಲಕೃಷ್ಣ ನಾಯಕ ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆಗೊಂಡಿದ್ದು, ಸರಕಾರ ಒಟ್ಟು 33 ಹಿರಿಯ ಪೋಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ದಾಂಡೇಲಿಯ DYSP ಮೋಹನ ಪ್ರಸಾದ ನಿವೃತ್ತಿಯ ನಂತರ ಶಿವಾನಂದ ಚಲವಾದಿ ಪ್ರಭಾರ ಅಧಿಕಾರ ನಿರ್ವಹಿಸುತ್ತಿದ್ದರು.