ಶಿರಸಿ : ಜಿಲ್ಲಾ ಮದ್ಯವರ್ತಿ ಬ್ಯಾಂಕ್ ಎಂದೇ ಕರೆಯಲ್ಪಡುವ ಕೆ.ಡಿ.ಸಿ.ಸಿ. ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಸಚಿವ ಶಿವರಾಂ ಹೆಬ್ಬಾರ್, ಉಪಾಧ್ಯಕ್ಷರಾಗಿ ಮೋಹನದಾಸ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆರಂಭದಿಂದಲೂ ಅಂದರೆ ನಿರ್ದೇಶಕರ ಆಯ್ಕೆಯ ಸಂದರ್ಭದಿಂದಲೂ ಈ ಬಾರಿ ಈ ಬ್ಯಾಂಕಿನ ಚುನಾವಣೆ ತುರುಸಿನಿಂದ ಕೂಡಿತ್ತು. ಬ್ಯಾಕಿನ ವಿವಿಧ ಕ್ಷೇತ್ರಗಳ ಒಟ್ಟೂ 16 ಸ್ಥಾನಗಳಲ್ಲಿ 6 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ 10 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಹಲವು ಹೊಸ ಮುಖಗಳ ಆಯ್ಕೆಯಾಗಿತ್ತು. ಕೆಲ ಹಳಬರು ಪರಾಭವಗೊಂಡಿದ್ದರು. ಅಧ್ಯಕ್ಷರಾಗಲೂ ಸಹ ಮಾಜಿ ಅಧ್ಯಕ್ಷ ಎಸ್.ಎಲ್. ಘೋಟ್ನೇಕರ , ಶಿವರಾಂ ಹೆಬ್ಬಾರ್, ಮೋಹನದಾಸ ನಾಯಕ ಸೇರಿದಂತೆ ಹಲವರು ಪ್ರಯತ್ನ ನಡೆಸಿದ್ದರು.
ಇದೇ ಮೊದಲ ಬಾರಿ ಸಹಕಾರಿ ಭಾರತಿ ತನ್ನ ಕೆಲಸ ಮಾಡಿತ್ತು. ಒಳಗೊಳಗೇ ಕಾಂಗ್ರೆಸ್ – ಬಿಜೆಪಿ ಎಂಬ ಸ್ಪರ್ದೆಯಾಗಿತ್ತು. ಅಂತಿಮವಾಗಿ ಶಿರಸಿಯ ಕೇಂದ್ರ ಕಛೇರಿಯಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮುಂದಿನ ಐದು ವರ್ಷಗಳ ಆವಧಿಗಾಗಿ ಶಿವರಾಂ ಹೆಬ್ಬಾರ್ ಹಾಗೂ ಮೋಹನದಾಸ ನಾಯಕ ಅಧ್ಯಕ್ಷ – ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಹುಶಹ ಇದೇ ಮೊದಲ ಬಾರಿಗೆ ಬಿ.ಜೆ.ಪಿ. ತೆಕ್ಕೆಗೆ ಕೆಡಿಸಿಸಿ ಬಿದ್ದಂತಾಗಿದೆ.