Site icon ಒಡನಾಡಿ

ಪಣಸೋಲಿ ನಾಲಾದಿಂದ ಉಸುಕು ತೆಗೆದ ಪ್ರಕರಣ : ಅರಣ್ಯ ಸಿಬ್ಬಂದಿ ಮತ್ತು ಜನರ ನಡುವೆ ಮಾರಾಮಾರಿ

ಗಾಯಗೊಂಡಿರುವ ಅರಣ್ಯ ಸಿಬ್ಬಂದಿಗಳು

ಜೋಯಿಡಾ: ಮನೆಕಟ್ಟಲೆಂದು ನಾಲಾದ ಉಸುಕನ್ನು ತೆಗೆದು ಟ್ರ್ಯಾಕ್ಟರ್‌‌ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ವ್ಯಕ್ತಿಗಳಿಬ್ಬರ ನಡುವೆ ಮಾರಾಮಮಾರಿ ನಡೆದ ಘಟನೆ ಜೋಯಿಡಾ ತಾಲೂಕಿನ ವಿರ್ನೋಲಿ ಅರಣ್ಯ ವಲಯದ ಪಣಸೋಲಿಯಲ್ಲಿ ಸೋಮವಾರ ನಡೆದಿದೆ.

ಈ ಘಟನೆ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ದೂರು- ಪ್ರತಿದೂರು ಪ್ರಕರಣ ದಾಖಲಾಗಿದೆ. ಪಿ.ಎಸ್.ಐ ಹನ್ಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಣಸೋಲಿಯ ಅರಣ್ಯ ಪ್ರದೇಶದ ನಾಲಾವೊಂದರಲ್ಲಿ ಮರಳು ದಾಸ್ತಾನಾಗಿತ್ತು. ಅದೇ ಊರಿನ ಕೃಷ್ಣಾ ಶೇಡೇಕರ ಹಾಗೂ ದೇವರಾಜ ಧರಣಿ ಸೇರಿ ಅದನ್ನು ಸ್ವಂತ ಬಳಕೆಗೆಂದು ತೆಗೆದು ಟ್ರಾö್ಯಕ್ಟರ್‌ನಲ್ಲಿ ತುಂಬಿ ತರುತ್ತಿದ್ದ. ಇದನ್ನು ರಣ್ಯ ರಕ್ಷಕರಾದ ಸಂದೀಪ ಗೌಡ ಹಾಗೂ ಬಸನಗೌಡರವರು ತಡೆದಿದ್ದಾರೆ. ಇಬ್ಬರ ನಡುವೆ ಮಾರಾಮಾರಿಯಾಗಿದೆ. ಈ ಹೊಡೆದಾಟದಲ್ಲಿ ಅರಣ್ಯ ರಕ್ಷಕ ಸಂದೀಪ ಗೌಡ ಹಾಗೂ ಮರಳು ಸಾಗಿಸುತ್ತಿದ್ದ ಕೃಷಣಾ ಶೇಡೇಕರ ಇಬ್ಬರೂ ಗಾಯಗೊಂಡಿದ್ದಾರೆ. ಈ ಇಬ್ಬರೂ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ರಾಮನರದಲ್ಲಿ ರಾಜಾರೋಷವಾಗಿ ಅಕ್ರಮ ಮರಳು ದಂದೆ ನಡೆಯುತ್ತಿದ್ದರೂ ಕಣ್ಮುಚ್ಚಿಕೊಂಡಿರುವ ಅರಣ್ಯ ಇಲಾಖೆಯವರು ಸ್ವಂತದ ಬಳಕೆಗೆಂದು ನಾಲಾದ ಉಸುಕು ತೆಗೆದು ಸಾಗಿಸುವಾಗ ಹಲ್ಲೆ ನಡೆಸುವಂತದ್ದೂ ಹಾಗೂ ಅರಣ್ಯ ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಎರಡೂ ಕೂಡಾ ಅಮಾನವೀಯವೇ ಆಗಿದೆ ಎನ್ನುತ್ತಿದ್ದಾರೆ ಪಣಸೋಲಿ ಗ್ರಾಮಸ್ಥರು.

Exit mobile version