Site icon ಒಡನಾಡಿ

ದಾಂಡೇಲಿಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ… ವೈದ್ಯರಿಗೂ, ಪೊಲೀಸರಿಗೂ ಸೋಂಕು…

ಅದ್ಯಾಕೋ ಗೊತ್ತಿಲ್ಲ, ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೇ ನಿತ್ಯ ಎರಡಂಕಿಯಲ್ಲಿಯೇ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಗುರುವಾರ ನಗರದಲ್ಲಿ ಮತ್ತೆ 25 ಜನರಲ್ಲಿ ಸೋಂಕು ದೃಢವಾಗಿದೆ. ಇದನ್ನೂ ಸೇರಿ ಒಟ್ಟೂ ಸೋಂಕಿತರ ಸಂಖ್ಯೆ 725 ಕ್ಕೆ ಏರಿಕೆಯಾಗಿದೆ. ಗುರುವಾರ ಬೈಲಪಾರ , ಟೌನ್ ಶಿಪ್, ಅಜಾದನಗರ, ಮಾರುತಿನಗರ, ಕೋಗಿಲಬನ, ಹಳೆದಾಂಡೇಲಿ, ಗಣೇಶನಗರ ಸೇರಿದಂತೆ ಹಲವೆಡೆಯ ಜನರಲ್ಲಿ ಪಾಸಿಟಿವ್ ಬಂದಿದೆ.

ಹಿಂದೆ ಒಂದಿಬ್ಬರು ಸರಕಾರಿ ಹಾಗೂ ಖಾಸಗಿ ವೈದ್ಯರು ಸೋಂಕಿಗೊಳಗಾಗಿ ಗುಣಮುಖರಾದ ಬೆನ್ನಲ್ಲೇ ಈಗ ಮತ್ತೆ ಸರಕಾರಿ ಆಸ್ಪತ್ರೆಯ ಮಹಿಳಾ ವೈದ್ಯೆ, ಇಬ್ಬರು ಖಾಸಗಿ ವೈದ್ಯರು, ಪೊಲೀಸ್ ಹಾಗೂ ಅಬಕಾರಿ ಸಿಬ್ಬಂದಿಗಳು ಮತ್ತು ಅವರ ಕುಟುಂಭದವರೂ ಸಹ ಕೊರೊನಾ ಸೋಂಕಿಗೊಳಗಾಗಿ ಕೋವಿಡ್ ಕೇರ್ ಸೆಂಟರ್ ಸೇರಿದ್ದಾರೆ.

ಬಿಡುಗಡೆ

ಬುಧವಾರ 12 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಧಾಖಲಾದ 725 ಸೋಂಕಿತರಲ್ಲಿ ಒಟ್ಟೂ 508 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ….

Exit mobile version