ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 700 ರ ಸನಿಹ ತಲುಪಿದೆ.
ಮಂಗಳವಾರ ಮತ್ತೆ 15 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇಲ್ಕಿಯವರೆಗೆ 681 ಜನರು ಸೋಂಕಿಗೊಳಗಾದಂತಾಗಿದೆ.
ಮಂಗಳವಾರ ಗಣೇಶನಗರ, ಲೆನಿನ್ ರಸ್ತೆ, ಬಾಂಬುಗೇಟ್, ಥರ್ಡ ನಂಬರ ಗೇಟ್, ಹಳೆ ಡಿ.ಆರ್.ಟಿ. ದಾಂಡೇಲಪ್ಪ ನಗರ, ಟೌನ್ ಶಿಪ್ ಸೇರಿದಂತೆ ಹಲವೆಡೆ ಸೋಂಕು ಕಾಣಿಸಿಕೊಂಡಿದೆ
ಸೋಮವಾರ ಗುಣಮುಖ ಹೊಂದಿದ 25 ಜನರನ್ನು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟೂ 481 ಜನರು ಗುಣಮುಖರಾಗಿ ಮನೆ ಸೇರಿದ್ದು, ಮಂಗಳವಾರ ಇನ್ನಷ್ಟು ಜನರು ಬಿಡುಗಡೆಯಾಗುವ ನಿರೀಕ್ಷೆಯಿದೆ.