ಒಬೊಬ್ಬರಲ್ಲಿ ಒಂದೊಂದು ರೀತಿಯ ಹವ್ಯಾಸ. ಬಗೆ ಬಗೆಯ ಆಸಕ್ತಿ. ಅದರಲ್ಲಿಯೇ ಅವರು ಸುಖ ಕಾಣುತ್ತಾರೆ. ಈತನನ್ನು ನೋಡಿ. ಈತ ನಿತ್ಯ ಮನೆ ಮನೆಗೆ ಪೇಪರ್ ಹಾಕುವ ಹುಡುಗ. ಹೆಸರು ಆಶಿಶ್ ಅಜಿತ್ ಬಸಲಿಂಗೋಳ. ದಾಂಡೇಲಿಯ ಗಾಂಧೀನಗರದ ನಿವಾಸಿ. ಓದಿನಲ್ಲೇನೂ ಹಿಂದೆ ಇಲ್ಲ. ಸದ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ. ಮನೆಯಲ್ಲಿದ್ದೇ ಖಾಲಿ ಏನು ಮಾಡುವುದು. ಏನಾದರೂ ಒಂದಿಷ್ಟು ಕೆಲಸ ಮಡೋಣ ಎಂದುಕೊಂಡಿರುವ ಈತ ನಿತ್ಯ ಮುಂಜಾನೆ ಮನೆ ಮನೆಗೆ ಪೇಪರ್ ಹಾಕುತ್ತಾನೆ. ಹೀಗೆ ಬದುಕಿಗಾಗಿ ಪೇಪರ್ ಹಾಕುವ ಹುಡುಗರು ಬಹಳ ಜನ ಇದ್ದಾರೆ. ಇವನದ್ದೇನು ವೀಶೇಷ ಅಂತೀರಾ. ಈತ ಎಲ್ಲರಂತೆಯೇ ಸೈಕಲ್ ತುಳಿದು ಪೇಪರ್ ಹಾಕುವ ಜೊತೆಗೆ ಈತನಲ್ಲೊಂದು ಹವ್ಯಾಸವಿದೆ. ನಾವು ಕಾರು, ಹಾಗೂ ಇತರೆ ವಾಹನಗಳಿಗೆ ಸ್ಟಿರಿಯೋ ಹಾಕಿಕೊಂಡು ಸಂಗೀತ ಕೇಳುತ್ತ ಹೋಗುವುದನ್ನು ನೋಡಿದ್ದೇವೆ. ಇತ್ತೀತ್ತಲಾಗಿ ಅದು ಟ್ರ್ಯಾಕ್ಟರ್ ವರೆಗೂ ಸೇರಿಕೊಂಡಿದೆ. ಇದನ್ನೂ ಮೀರುವಂತೆ ಪೇಪರ್ ಹಾಕುವ ಈ ಹುಡುಗ ತನ್ನ ಸೈಕಲ್‍ಗೆ ಸ್ಪೀಕರ್ ಒಂದನ್ನು ಅಳವಡಿಸಿಕೊಂಡಿದ್ದಾನೆ. ಅದಕ್ಕೆ ಅವಶ್ಯವಿರುವ ಬ್ಯಾಟರಿ ಕನೆಕ್ಷನ್ ಎಲ್ಲಾ ಮಾಡಿಕೊಂಡಿದ್ದಾನೆ. ಮುಂಜಾನೆದ್ದು ಪೇಪರ್ ಪಡೆದು ಮನೆ, ಮನೆಗೆ ಹಾಕುವ ಸದರ್ಭದಲ್ಲಿಯೇ ಈತ ತನ್ನ ಸೈಕಲ್ ಮೇಲೆ ಅಳವಡಿಸಿದ ಸ್ಪೀಕರನ್ನು ಹಚ್ಚುಕೊಂಡು, ತನ್ನಿಷ್ಠದ ಹಾಡು ಕೇಳುತ್ತ, ಪೇಪರ್ ಹಾಕುತ್ತ ಹೋಗುತ್ತಾನೆ. ಮಳೆಗಾಲದಲ್ಲಿ ಸ್ಪೀಕರ್‍ಗೆ ಮಳೆ ನೀರು ತಾಗದಿರಲೆಂದು ಪ್ಲಾಸ್ಟಿಕ್ ಹೊದಿಸಿಕೊಂಡುರುತ್ತಾನೆ. ಹೀಗೆ ಸೈಕಲ್‍ಗೆ ಸ್ಪೀಕ್ ಹಾಕಿಕೊಂಡು ಸಿನಿಮಾ ಹಾಡು ಕೇಳುತ್ತ ಪೇಪರ್ ಹಾಕುತ್ತ ಹೋಗುವ ಹುಡುಗನ ಸಂಗೀತಾಸಕ್ತಿಯನ್ನು ಜನ ಕುತುಹಲದಿಂದಲೇ ನೋಡುತ್ತಿರುತ್ತಾರೆ.