ಕಳೆದ ಕೆಲದಿನಗಳಿಂದ ದಾಂಡೇಲಿಯಲ್ಲಿ ಹೆಚ್ಚುತ್ತಲಿದ್ದ ಕೊರೊನಾ ಸೋಂಕಿತರ ಸಂಖ್ಯೆಯಿಂದ ಆತಂಕಗೊಂಡಿದ್ದ ದಾಂಡೇಲಿಗರು ಶುಕ್ರವಾರ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಶುಕ್ರವಾರ ಬಂದ ಕೊರರೊನಾ ಹೆಲ್ತ್ ಬುಲೆಟಿನ್ ವರದಿಯಲ್ಲಿ ನಗರದ ಟೌನ್‌ಶಿಪ್‌ನ 46 ವರ್ಷದ ಪುರಷನೋರ್ವನಲ್ಲಿ ಮಾತ್ರ ಕೊರೊನಾ ಪಾಸಿಟಿವ್ ದೃಢವಾಗಿದೆ. ಉಳಿದಂತೆ ಸೋಂಕಿಗೊಳಗಾಗಿ ಗುಣಮುಖನಾಗಿ ಮನೆ ಸೇರಿರುವ ನ್ಯಾಯವಾದಿಯ ಸಂಪರ್ಕದಲ್ಲಿದ್ದವರಿಗೆ ಹಾಗೂ ಖಾಸಗಿ ಆಸ್ಪತ್ರೆಯ ಹಲವು ( ಇಬ್ಬರಿಗೆ ಮಾತ್ರ ಪಾಸಿಟಿವ್) ಸಿಬ್ಬಂದಿಗಳ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿರುವ ಮಾಹಿತಿಯಿದೆ.
ಉಳಿದಂತೆ ಕಳೆದ ಮೂರು ದಿನಗಳಿಂದ ಪಾಸಿಟಿವ್ ಬಂದು ಆಸ್ಪತ್ರೆ ಸೇರಿರುವರು ದಾಂಡೇಲಿಯ ಮುರಾಜಿ ವಸತಿ ನಿಲಯದಲ್ಲಿ ಪ್ರಾರಭಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ದಾಂಡೇಲಿಯಲ್ಲಿ 85 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು ಅವರಲ್ಲಿ 15 ರಷ್ಟು ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಒಂದು ಸಾವು ಸಂಭವಿಸಿದೆ.