ಓ ಮನುಜಾ…, ಸುಮ್ಮನೆ ಅಲೆಯುವೆ ಏಕೆ
ಮನೆಯಲ್ಲೇ ಇದ್ದು ನಿನ್ನ ದೇಶಭಕ್ತಿ ತೋರಿಸಬಾರದ್ಯಾಕೆ!!
ಈಗಿಲ್ಲ ಮೊದಲಿನಂತೆ ಧಾವಂತದ ಓಟ,
ಪ್ರತಿ ಗಳಿಗೆಯೂ ನಮ್ಮವರ ಒಡನಾಟ,
ಕಾಣ ಸಿಗುತಿಹುದು ಎಂದೋ ಸೂರ್ಯಾಸ್ತ , ಉದಯದ ನೋಟ,
ಕಲಿಸ ಹೊರಟಿರಬಹುದೆ ಪ್ರಕೃತಿ ನಾವು ಮರೆತಿಹ ಪರಿಪಾಠ…..!!!!
ಬಂದಿರಬಹುದೆ ಕೊರೊನ ಹೆಸರಲಿ ಮಹಾ ಮಾರಿ,
ತಿದ್ದಿ ತಿಳಿಸಲು ನಾವು ಮರೆತಿಹ ಸಂಸ್ಕಾರದ ದಾರಿ,
ನಮ್ಮದೊಂದು ಮನವಿ, ಮೈ ಮರೆತು ನಿಯಮ ಮೀರದಿರಿ
ಮನೆಯಲ್ಲಿಯೇ ಇರೋಣ ನಾಡಿಗೆ ಶುಭ ಕೋರಿ….!!!!
ಸುಮ್ಮನ್ಯಾಕೆ ಮಾಡುವಿರಿ ಗೊತ್ತಿರದ ನಾಳೆಯ ಚಿಂತೆ,
ಮತ್ತೆ ಮರಳದ ಈ ದಿನ ನಮ್ಮದೇ ಅಂತೆ,
ಬಿಡಿಸಲಾಗದ ಚಕ್ರವ್ಯೂಹದಂತೆ ಈ ಸಂಸಾರ ಸಂತೆ,
ಸಜ್ಜನರ ಕೈ ಬಿಡಳು ನಮ್ಮ ಧರಣಿ, ಹೃದಯವಂತೆ….!!!!
- ಶ್ವೇತಾ ಜಿ. ಭಟ್ಟ