- ಕಳೆದು ಹೋದೆ
ಗೊತ್ತುಗುರಿಯಿಲ್ಲದ..
ಸಮಾಧಿಯಂತೆ
ನಿಟ್ಟುಸಿರುಗಳಲಿ
ಬಿಕ್ಕಳಿಕೆಗಳಲ್ಲಿ.
- ನಿನ್ನ ಪ್ರೀತಿಸಿ
ಮುದ್ದುಮಾಡಿದ್ದೆ ಬಂತು
ಮತ್ತಿನಲಂದು
ಹೊತ್ತಿಲ್ಲದ ಹೊತ್ನಲ್ಲಿ
ಬಿಟ್ಟಕೊಂಡಾತು ಮುತ್ನ
- ಕರುಳ ಹಿಂಡಿ
ರಕ್ತ ಹರಿಸಿದರು
ಬಿಡದಾ ನಂಟು
ಕತ್ತ ನಿವಾಳಿಸಿದೆ
ಗೋರಿಯ ಸುತ್ತಮುತ್ತ.
- ನನ್ನದೇನಿದೆ
ನಿನ್ನದೆ ಅಂದವನು
ಜಿಪುಣನಾದ
ಮೊಬೈಲ್ ಕೊಡಿಸಿಲ್ಲ
ಕರೆನ್ಸಿ ಹಾಕಿಸಿಲ್ಲ..
- ಮಾತು ಮಾತಿಗೆ
ಬಿಸಿಯುಸಿರು ಮಾಗಿ
ಮೋಡ ಕವಿದು
ಇರುಳು ಹೊದ್ದಂಗಾತು
ಮಿಂಚಿನ ದೀಪದಾಂಗ