Site icon ಒಡನಾಡಿ

ಶನಿವಾರದಿಂದ ದಾಂಡೇಲಿಯಲ್ಲಿ ಅರ್ಧದಿನ ಲಾಕ್‍ಡೌನ್: ಮುಂಜಾನೆ 8ರಿಂದ ಮದ್ಯಾಹ್ನ 3ರವರೆಗೆ ಮಾತ್ರ ಓಪನ್

ದಾಂಡೇಲಿ ನಗರದ ಒಂದು ನೋಟ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಕಾರಣದಿಂದಾಗಿ ದಾಂಡೇಲಿಯಲ್ಲಿ ಶನಿವಾರದಿಂದ ಮದ್ಯಾಹ್ನ 3 ಗಂಟೆಯ ನಂತರ ಕಟ್ಟುನಿಟ್ಟಿನ ಲಾಕ್‌ ಡೌನ್‌ ಆಗಲಿದೆ.


ದಾಂಡೇಲಿಯಲ್ಲಿ ಶುಕ್ರವಾರ ಎಂಟು ಕೊರೊನಾ ಪೊಸಿಟಿವ್ ಪ್ರಕರಣಗಳು ದೃಢವಾಗಿವೆ. ಇಲ್ಲಿಯವರೆಗೆ ಒಟ್ಟೂ 27 ಪ್ರಕರಣಗಳಾದಂತಾಗಿದೆ. ಜನ ಆತಂಕಕ್ಕೊಳಗಾಗುತ್ತಿದ್ದಾರೆ. ಇದರಿಂದ ನಗರದ ಜನರು ಹಾಗೂ ವ್ಯಾಪಾರಸ್ಥರೇ ಸ್ವಯಂ ಪ್ರೇರಣೆಯಿಂದ ಅರ್ಧ ದಿನದ ಲಾಕ್‍ಡೌನ್ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ತಹಶೀಲ್ದಾರ್ ಶೇಲೇಶ ಪರಮಾನಂದ ಸಿ.ಪಿ.ಐ ಪ್ರಭು ಗಂಗನಳ್ಳಿ, ಪಿ.ಎಸ್.ಐ. ಯಲ್ಲಪ್ಪ.ಎಸ್.ರವರ ನೇತೃತ್ವದಲ್ಲಿ ವ್ಯಾಪಾರಸ್ಥರ ಸಂಘಟನೆಯವರ ಸಭೆ ನಡೆದಿದ್ದು, ಅಲ್ಲಿ ವ್ಯಾಪಾರಸ್ಥರು ನಗರದ ಹಿತದೃಷ್ಠಿಯಿಂದ ಅರ್ಧದಿನದ ಲಾಕ್‍ಡೌನ್‍ಗೆ ಸಹಕರಿಸುವುದಾಗಿ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ದಾಂಡೇಲಿಯಲ್ಲಿ ಅರ್ಧದಿನದ ಲಾಕ್‍ಡೌನ್ ಶನಿವಾರದಿಂದ ನಡೆಯಲಿದೆ.

ಶನಿವಾರ ಮುಂಜಾನೆ 8 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಮಾತ್ರ ಮಾರುಕಟ್ಟೆ ತೆರದಿರುತ್ತದೆ. ರವಿವಾರ ಎಂದಿನಂತೆ ದಿನವಿಡೀ ಕಪ್ರ್ಯು ಮತ್ತು ಲಾಕ್‍ಡೌನ್ ಆಗಲಿದೆ. ಸೋಮವಾರ ಮುಂಜಾನೆ 8 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಮಾರ್ಕೆಟ್ ತೆರೆಯಲಿದ್ದು, ಎರಡು ಗಂಟೆಯ ನಂತರ ಸಂಪೂರ್ಣವಾಗಿ ಲಾಕ್‍ಡೌನ್ ಆಗಲಿದೆ. ಇದು ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಸ್ವಯಂ ನಿರ್ಧಾರವಾಗಿದೆ. ನಗರದ ಹಿತದೃಷ್ಠಿಯಿಂದ ಸಾರ್ವಜನಿಕರೂ ಸಹ ಸಹಕರಿಸಬೇಕು ಎಂದು ಎಂದು ತಹಶೀಲ್ದಾರ್ ಶೇಲೇಶ ಪರಮಾನಂದ ಹಾಗೂ ಸಿ.ಪಿ.ಐ ಪ್ರಭು ಗಂಗನಳ್ಳಿ, ಪಿ.ಎಸ್.ಐ. ಯಲ್ಲಪ್ಪ ಎಸ್. ತಿಳಿಸಿದ್ದಾರೆ.

Exit mobile version