ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ 80 ಕೊರೊನಾ ಪಾಸಿಟಿವ್ ಪ್ರಕರಣ ದೃಢವಾಗಿದ್ದು, ದಾಂಡೇಲಿ ಸೇಪ್ ಆಗಿದೆ.
ಜಿಲ್ಲೆಯ ಭಟ್ಕಳದಲ್ಲಿ 40, ಕುಮಟಾದಲ್ಲಿ 20, ಹೊನ್ನಾವರದಲ್ಲಿ 9, ಕಾರವಾರದಲ್ಲಿ 5, ಸೇರಿದಂತೆ 80 ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ ಹೆಚ್ಚಿನವರು ಹೊರ ದೇಶದಿಂದ ಮರಳಿದವರೇ ಹೆಚ್ಚಿನವರಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500 ಗಡಿ ದಾಟಿದಂತಾಗಿದೆ.
ಆದರೆ ದಾಂಡೇಲಿಯಲ್ಲಿ ಸೋಮವಾರ ಒಂದೂ ಪ್ರಕರಣಗಳಾಗದೇ ಸೇಫ್ ಆಗಿರುವುದು ಸಮಾಧಾನ ತಂದಿದೆ.