ಕಲಿಗಳು ಹುಲಿಗಳು ವೀರರು ಧೀರರು
ನಮ್ಮನು ಕಾಯುವ ಯೋಧರು
ದೇಶವ ಕಾಯುತ ತಮ್ಮನು ಮರೆವರು
ನಾಡಿನ ಹೆಮ್ಮೆಯ ರಕ್ಷಕರು
ಸನಿಹವಿಲ್ಲ ಬಂಧು ಬಳಗ
ದೇಶವೆ ಅವರಿಗೆ ಸರ್ವ ಬಳಗ
ದೇಶ ಸೇವೆಯ ತ್ಯಾಗದಲ್ಲಿ
ತಮ್ಮ ಹಿತವ ಮರೆವರು
ಸಹಿಸುತ್ತಾರೆ ಕೊರೆವ ಚಳಿಯ
ಒಡ್ಡುತ್ತಾರೆ ಮಳೆಗೆ ಎದೆಯ
ಪೊರೆಯುತ್ತಾರೆ ನಾಡ ಗಡಿಯ
ಮೆಟ್ಟುತ್ತಾರೆ ವೈರಿ ಪಡೆಯ
ನಾಡಿಗಾಗಿ ದುಡಿವರು
ರಾಷ್ಟ್ರಕ್ಕಾಗಿ ಮಡಿವರು
ಶತಶತಾದಿ ಯೋಧರು
ಹರಿಸಿದರು ನೆತ್ತರು
ನಮ್ಮ ನೆಮ್ಮದಿಯ ನಿದ್ದೆ
ಯೋಧರ ಜಾಗರಣೆಯ ಫಲ
ನಮ್ಮ ಸಂಬ್ರಮಾಚರಣೆ ಗಳು
ಯೋಧರು ನೀಡಿದ ಭಿಕ್ಷೆಗಳು
ನಮ್ಮ ಸುಖದ ನಾಳೆಗಾಗಿ
ತಮ್ಮ ಇಂದುಗಳ ಬಲಿ ನೀಡಿ
ಹುತಾತ್ಮರಾದವರಿವರು
ತಮಗಿದೋ ನಮ್ಮ ಸಲಾಂ
— ಶುಭಲಕ್ಷ್ಮಿ ಆರ್. ನಾಯಕ