ದಾಂಡೇಲಿ: ದಾಂಡೇಲಿಯ ಪಟೇಲನಗರದ 28 ವರ್ಷದ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದು ಗುರುವಾರ ದೃಢವಾಗಿದೆ.
ಈಕೆ ಈ ಹಿಂದೆ ಮುಂಬೈಗೆ ಚಿಕಿತ್ಸೆಗೆ ಹೋಗಿ ಮರಳಿದ್ದ ಕೊರೋನಾ ಸೋಂಕಿತ ವ್ಯಕ್ತಿಯ ಮಡದಿಯಾಗಿದ್ದು, ಈಕೆ ಕೂಡಾ ಗಂಡನ ಜೊತೆಗೆ ಮುಂಬೈಗೆ ಹೋಗಿ ಬಂದವಳಾಗಿದ್ಹೋಂದಳು. ನಂತರ ಹೋಂ ಕ್ವಾರೆಂಟೈನ್ ನಲ್ಲಿ ಇದ್ದಳು. ಈಕೆ ಗರ್ಭಿಣಿಯಾಗಿರುವ ಈ ಸೋಂಕಿತೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಕಾರವಾರದ ಕೊರೊನಾ ವಾರ್ಡಗೆ ಸಾಗಿಸಲಾಗಿದೆ.
ಹಳಿಯಾಳದಲ್ಲಿಯೂ ಗುರುವಾರ ಮತ್ತೊಂದು ಕೊರೊನಾ ಪೊಸಿಟಿವ್ ಬಂದಿದ್ದು, ಅದು 2 ವರ್ಷದ ಮಗು ಆಗಿರುವುದೇ ಆತಂಕ ತಂದಿದೆ. ಈ ಮಗುವನ್ನೂ ಸಹ ಕಾರವಾರಕ್ಕೆ ಸಾಗಿಸಲಾಗಿದೆ.