Site icon ಒಡನಾಡಿ

ಉತ್ತರ ಕನ್ನಡದಲ್ಲಿ ಕೊರೊನಾಕ್ಕೆ ಮೂರು ಬಲಿ!! : ಬುಧವಾರ 23 ಜನರಿಗೆ ಸೋಂಕು…

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬುಧವಾರ ಎರಡು ಬಲಿಯಾಗಿದೆ. ಮಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದರೆ, ಯಲ್ಲಾಪುರದಲ್ಲಿ ಕ್ವಾರೆಂಟೈನ್‌ನಲ್ಲಿದ್ದು ಮಂಗಳವಾರ ಸಾವನ್ನಪ್ಪಿದ ಮಹಿಳೆಯ ಗಂಟಲು ದ್ರವದ ವರದಿ ಕೂಡಾ ಪಾಸಿಟಿವ್‌ ಬಂದಿರುವ ಬಗ್ಗೆ ಜಿಲ್ಲಾಡಳಿತ ಖಚಿತ ಪಡಿಸಿದೆ. ಮತ್ತೋರ್ವ ಭಟ್ಕಳದ ವ್ಯಕ್ತಿ ಕೂಡಾ ಮಂಗಳೂರು ಆಸ್ಪತ್ರೆಯಲ್ಲಿ ಮಂಗಳವಾರ ಸಾವನ್ನಪ್ಪಿರುವ ಸುದ್ದಿಯಾಗಿತ್ತು.

ಬುಧವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟೂ 23 ಕೊರೊನಾ ಪಾಸಿಟಿವ್‌ ಪ್ರಕರಣ ದ್ರಢವಾಗಿದೆ. ಭಟ್ಕಳದಲ್ಲಿ 11, ಅಂಕೋಲಾದಲ್ಲಿ ಐದು, ಕುಮಟಾದಲ್ಲಿ ಆರು ಕಾರವಾರದಲ್ಲಿ ಓರ್ವನಿಗೆ ಸೋಮಕು ದೃಢವಾಗಿದೆ.

ರಾಜ್ಯ, ದೇಶದಾದ್ಯಂತ ಕೊರೊನಾ ಸೋಂಕಿನಿಂದ ಸಾಕಷ್ಟು ಸಾವು ಸಂಭವಿಸುತ್ತಿದ್ದರೂ ಉತ್ತರ ಕನ್ನಡ ಜಿಲ್ಲೆ ಮಾತ್ರ ಕೊರೊನಾ ಸೋಂಕಿನ ಸಾವಿನಿಂದ ಹೊರತಾಗಿತ್ತು. ಇದೀಗ ಬುಧವಾರ ಎರಡು ಸಾವು ಖಚಿತವಾಗಿದ್ದು, ಮಂಗಳವಾರದ ಭಟ್ಕಳ ವ್ಯಕ್ತಿಯ ಸಾವಿನ ಬಗ್ಗೆ ಜಿಲ್ಲಾಡಳಿತ ದೃಢ ಪಡಿಸಬೇಕಿದೆ. ಈ ಸಾವುಗಳು ಸಂಭವಿಸುವ ಮೂಲಕ ಉತ್ತರ ಕನ್ನಡದಲ್ಲಿ ಕೂಡಾ ಕೊರೊನಾ ತನ್ನ ಬಲಿ ಪಡೆದುಕೊಂಡಂತಾಗಿದೆ.

Exit mobile version