ದಾಂಡೇಲಿ: ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮಂಗಳವಾರ ದಾಂಡೇಲಿ- ಹಳಿಯಾಳದಲ್ಲಿ ತಲಾ ನಾಲ್ಕು ಸೊಂಕಿತರು ಸೇರಿದಂತೆ ಒಟ್ಟು ಎಂಟು ಪಾಸಿಟಿವ್ ಪ್ರಕರಣಗಳು ದ್ರಢಪಟ್ಟಿವೆ ಎಂಬ ಮಾಹಿತಿ ಲಭ್ಯವಾಗಿದೆ. ದಾಂಡೇಲಿಯ ನಾಲ್ಕು ವರ್ಷದ ಮಗುವಿಗೂ ಸೋಂಕು ದ್ರಢವಾಗಿರುವುದು ಆತಂಕದ ಬೆಳವಣಿಗೆಯಾಗಿದೆ.
ದಾಂಡೇಲಿಯ ಥರ್ಡ ನಂಬರನ ಗೇಟ್ ಬಳಿಯ ಇಬ್ಬರಿಗೆ ( ತಾಯಿ ಮತ್ತು ನಾಲ್ಕು ವರ್ಷದ ಮಗು), ಗಣೇಶನಗರದ ಓರ್ವರಿಗೆ ಹಾಗೂ ಬಂಗೂರನಗರ ಡಿ.ಆರ್.ಟಿ. ಯ ಒರ್ವರಿಗೆ ಸೇರಿ ದಾಂಡೇಲಿಯಲ್ಲಿ ನಾಲ್ವರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಇದು ಮಹಾರಾಷ್ಟ್ರ, ಗುಜಜರಾತ ಹಾಗೂ ಆಂದ್ರ ಫ್ರದೇಶದಿಂದ ಬಂದಿರುವ ನಂಜು ಎನ್ನಲಾಗಿದೆ. ಈ ಸೋಂಕಿತರನ್ನು ದಾಂಡೇಲಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಂಜೆಯ ಹೊತ್ತಿಗೆ ಕಾರವಾರದ ಕ್ರಿಮ್ಸ ಕೊರೊನಾ ವಾರ್ಡಗೆ ಸಾಗಿಸುವ ಸಾದ್ಯತೆಯಿದೆ. ಮಂಗಳವಾರದ ನಾಲ್ಕು ಪ್ರಕರಣಗಳೂ ಸೇರಿದಂತೆ ದಾಂಡೇಲಿಯಲ್ಲಿ ಇದುವರೆಗೂ ಹನ್ನೊಂದು ಕೊರೋನಾ ಪ್ರಕರಣಗಳು ದಾಖಲಾದಂತಾಗಿದ್ದು, ಹಿಂದಿನ ಆರು ಸೋಂಕಿತರು ಗುಣಮುಖರಾಗಿ ಮನೆ ಸೇರಿರುತ್ತಾರೆ.
ಇನ್ನು ಹಳಿಯಾಳದಲ್ಲಿಯೂ ಮಂಗಳವಾರದಂದು ನಾಲ್ಕು ಕೊರೊನಾ ಪಾಸೊಟಿವ್ ಪ್ರಕರಣ ದೃಢ ಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೊತೆಗೆ ಭಟ್ಕಳದಲ್ಲಿ 21, ಕುಮಟಾದಲ್ಲಿ 6 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿಂದು ದಾಖಲೆ ಎಂಬಂತೆ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊ್ರೊನಾ ಪ್ರಕರಣ ದಾಖಲಾಗಿರುವ ವರದಿಯಾಗಿದೆ.