ಅವಳು ಹಚ್ಚಿಟ್ಟು ಹೋದ
ದೀಪದ ತಂಬೇಳಕಿನಡಿ
ಇಂದಿಗೂ ಕಾದು ಕುಳಿತ್ತಿದ್ದೇನೆ
ಅವಳಿಗಾಗಿ
ಅವಳ ಬರುವಿಕೆಗಾಗಿ…..
ಅವಳು ಜೊತೆಗಿಟ್ಟು ಹೋದ
ಹೆಜ್ಜೆ ಗೆಜ್ಜೆಗಳ ನಾದಲೆಗಳಲ್ಲಿ
ಇಂದಿಗೂ ಅಲೆಮಾರಿಯಂತೆ ಅಲೆಯುತ್ತಿದ್ದೇನೆ
ಅವಳಿಗಾಗಿ
ಅವಳ ಅಂತರರುಹುವಿಗಾಗಿ
ಅವಳು ಮುತ್ತಿಟ್ಟು ಹೋದ
ನೆನಪುಗಳ ಮೂಟೆ ಹೊತ್ತು
ಇಂದಿಗೂ ಬಿಡದೆ ಹಿಂಬಾಲಿಸುತ್ತಿದ್ದೇನೆ
ಅವಳಿಗಾಗಿ
ಅವಳ ಸನಿಹಗಾಗಿ…..
ಅವಳು ಬಿಟ್ಟು ಹೋದ
ಪಿಸು ನುಡಿಗಳ ತಕ್ಕೆಯೊಳಗೆ
ಇಂದಿಗೂ ಉಸಿರಿಟ್ಟು ಉಸುರುತ್ತಿದ್ದೇನೆ
ಅವಳಿಗಾಗಿ
ಅವಳ ಪ್ರೀತಿಗಾಗಿ……
–ಎನ್.ಎಲ್.ನಾಯ್ಕ ,ದಾಂಡೇಲಿ