ದಾಂಡೇಲಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೀರ್ವರ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು ಎಂಟು ದಿನಗಳ ನಂತರ ಇದೀಗ ಕೊಲೆ ಪ್ರಕರಣ ದಾಖಾಗಿ, ಇಬ್ಬರು ಬಂಧನಕ್ಕೊಳಗಾಗಿದ್ದಾರೆ.
ನಗರದ ಟೌನ್‍ಶಿಪ್‍ನ ದಯಾನಂದ ಒಂಟೆ (27) ಎಂಬಾತನೇ ಹೊಡೆದಾಟದಲ್ಲಿ ಗಾಯಗೊಂಡು ಸಾವ್ನಪ್ಪಿದ (ಕೊಲೆಯಾದ) ವ್ಯಕ್ತಿಯಾಗಿದ್ದಾನೆ. ಪಟೇಲನಗರದ ಶೌಕತ್ ಅಲಿ ಸತ್ತಾರಸಾಬ ಜಮಾದಾರ (25) ಹಾಗೂ ದೀಪಕ ಚಂದ್ರಶೆಖರ ಪಲ್ಲೇದ (24) ಎಂಬವರೇ ಪ್ರಕರಣದಲ್ಲಿ ಕೊಲೆ ಆರೋಪಿಗಳಾಗಿ ಬಂಧನಕ್ಕೊಳಗಾಗಿದ್ದಾರೆ.
ಸ್ನೇಹಿತರಾಗಿರುವ ದಯಾನಂದ ಒಂಟಿ, ಶೌಕತ್ ಜಮಾದಾರ, ದೀಪಕ ಪಲ್ಲೇದ ಇವರೆಲ್ಲರೂ ಕಳೆದ ಮಾರ್ಚ 7 ರಂದು ಪಟೇಲನಗರ ಸೇತುವೆಯ ಬಳಿ ಸೇರಿದ್ದ ಇವರು ಹಾಮಾತನಾಡುತ್ತಿರುವಾಗಲೇ ಮೊಬೈಲ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ದಯಾನಂದ, ದೀಪಕ, ಶೌಕತ್ ನಡುವೆ ಜಗಳವಾಗಿದೆ. ನಂತರ ಉಳಿದ ಸ್ನೇಹಿತರು ಜಗಳ ಬಿಡಿಸಿ ಸಮಾದಾನ ಪಡಸಿ ಹೋಗಿದ್ದಾರೆ. ಸ್ನೇಹಿತರ ನಡುವೆ ಆಗಿದ್ದ ಜಗಳವೆಂದು ಯಾರೂ ಸಹ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.
ಘಟನೆಯಲ್ಲಿ ದಯಾನಂದ ತಲೆಗೆ ಗಾಯವಾಗಿತ್ತು. ಗಾಯಗೊಂಡ ದಯಾನಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಕೆಲಸ ಮಾಡುವಾಗ ಮೇಲಿಂದ ಸಾಮಾನು ಬಿದ್ದು ತಲೆಗೆ ಗಾಯವಾಗಿದೆ ಎಂದು ಸುಳ್ಳಿ ಹೇಳಿ ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾನೆ. ಒಂದು ದಿನ ಧಾರವಾಡ ಆಸ್ಪತ್ರೆಗೂ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾನೆ. ಆದರೆ ಆತನಿಗೆ ತಲೆಗಾದ ಗಾಯ ವಾಸಿಯಾಗಿರಲಿಲ್ಲ. ಶನಿವಾರ ಇದು ಮತ್ತೆ ಉಲ್ಬಣಗೊಂಡಿದ್ದು ಆತ ಮತ್ತೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯದವಾದಂತಾಗಿದೆ.
ದಯಾನಂದನ ಸಾವಿನ ನಂತರ ಆತನ ಸಹೋದರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಗರ ಪೊಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪಿ.ಎಸ್.ಐ ಯಲ್ಲಪ್ಪ ಎಸ್. ಪ್ರಕರಣ ದಾಖಲಿಸಿಕೊಂಡು, ತಕ್ಷಣ ಕಾರ್ಯ ಪ್ರವೃತ್ತರಾಗಿ, ಪ್ರಕರಣ ದಾಖಲಾದ 12 ಘಂಟೆಯೊಳಗಡೆ ಆರೋಪಿಗಳಾದ ತೌಸಿಪ್ ಜಮಾದಾರ ಹಾಗೂ, ದೀಪಕ ಪಲ್ಯದನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಡಿ.ವೈ.ಎಸ್.ಪಿ. ಪಿ. ಮೋಹನಪ್ರಸಾದ, ಸಿ.ಪಿ.ಐ. ಪ್ರಭು ಗಂಗನಳ್ಳಿ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಯಲ್ಲಪ್ಪ ನೇತೃತ್ವದಲ್ಲಿ ನಡೆದ ಕೊಲೆ ಆರೋಪಿಗಳ ಬಂಧನದ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಮಹಾದೃವಿ ನಾಯ್ಕೋಡಿ, ಎ.ಎಸ್.ಐ ಬಸವರಾಜ ಒಕ್ಕುಂದ, ಸಿಬ್ಬಂದಿಗಳಾದ ಭೀಮಪ್ಪ ಕದರಮಂಡಲಗಿ, ಪ್ರಶಾಂತ ನಾಯ್ಕ, ಮಂಜು ಶೆಟ್ಟಿ, ಮಂಜುನಾಥ ದ್ಯಾಮಟ್ಟಿ ಮುಂತಾದವರು ಭಾಗವಹಿಸಿದ್ದರು.