ಕೆ.ಎಸ್.ಆರ್.ಟಿ.ಸಿ.ಯ ಚಾಲಕ ಹಾಗೂ ನಿರ್ವಾಹಕಿ ಸೇರಿ ಬಸ್ ನಿಲ್ದಾಣದಲ್ಲಿಯೇ ಮಾಡಿದ ಟಿಕ್ ಟಾಕ್ ನೃತ್ಯ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ದಾಂಡೇಲಿ ಸಾರಿಗೆ ಘಟಕದ ಸಿಬ್ಬಂದಿಗಳಾಗಿರುವ ಇವರು ತಮ್ಮ ಕರ್ತವ್ಯದ ಸಮಯದಲ್ಲಿ ಬಿಡುವಿದ್ದಾಗ ಬಸ್ ನಿಲ್ದಾಣದ ಆವರಣದಲ್ಲಿಯೇ ರವಿಚಂದ್ರನ್ ನಟಿಸಿದ ‘ಪುಟ್ನಂಜ’ ಚಿತ್ರದ ಹಾಡಾದ ‘ಯಾರಿವಳು, ಯಾರಿವಳು ಸೂಜಿ ಮಲ್ಲಿ ಕಣ್ಣವಳು’ ಹಾಡಿನ ಸಂಗೀತಕ್ಕೆ ಹೆಜ್ಜೆ ಹಾಕಿದ್ದಾರೆ. ಇವರ ನಡುವೆ ಮತ್ತೋರ್ವ ಸಿಬ್ಬಂದಿ ನಿಂತಿದ್ದು ಆತನ ಬೋಳು ತಲೆಯ ಮೇಲೆ ಕೈ ಆಡಿಸುವ ಹಾಗೆ ಇವರಿಬ್ಬರೂ ನರ್ತಿಸಿದ್ದು, ಇದನ್ನು ಟಿಕ್ ಟಾಕ್ ವಿಡಿಯೋ ಮಾಡಿ ವಾಟ್ಸೆಪ್‍ನಲ್ಲಿ ಹರಿ ಬಿಟ್ಟಿದ್ದಾರೆ. ಇದು ಎಲ್ಲಡೆ ವೈರಲ್ ಆಗಿದೆ.