Site icon ಒಡನಾಡಿ

ಕೆರೆ ಹೂಳೆತ್ತಲಿಲ್ಲ, ಜಲ ಕ್ಷಾಮತೋರಲಿಲ್ಲ… ಅದೇನು ಕೊರೊನಾ ಕರಾಮತ್ತೋ…!

ಭೂಮಿಯ ಅಂತರ್ಜಲ ಹೆಚ್ಚಿಸಲು ಈ ಕೆರೆಗಳನ್ನು ಹೂಳೆತ್ತಬೇಕು ಎಂಬುದು ವೈಜ್ಞಾನಿಕ ವಿಚಾರ. ಆದರೆ ಈ ಬಾರಿಯ ಬೇಸಿಗೆಯಲ್ಲಿ ಈ ಅಂತರ್ಜದ ಸಮಸ್ಯೆಯೇ ಆಗದಿರುವುದು ವಿಜ್ಞಾನಕ್ಕೊಂದು ಸವಾಲು ಎನ್ನಬಹುದಾಗಿದೆ.

ಪ್ರತೀ ಬೇಸಿಗೆ ಬಂದಾಗ ಜಲಕ್ಷಾಮದ್ದೇ ಸುದ್ದಿಯಾಗುತ್ತಿತ್ತು. ದಾಂಡೇಲಿ, ಹಳಿಯಾಳದ ಗ್ರಾಮೀಣ ಭಾಗಗಳು ಕೃಷಿಯನ್ನೇ ನೆಚ್ಚಿಕೊಂಡಿವೆ. ಇಲ್ಲಿ ಭೂಮಿ ಹದಕ್ಕೆ ನೀರು ಬೇಕೇ ಬೇಕು. ಬೇಸಿಗೆ ಬಂದಾಗ ನೀರಿನ ತುಟ್ಟಾಗೃತೆ ಆಗುತ್ತಿದ್ದಂತೆಯೇ ಕಳೆದ ಕೆಲ ವರ್ಷಗಳಿಂದ ಕೆರೆ ಹೂಳೆತ್ತುವ ಕೆಲಸಗಳಾಗುತ್ತಿದ್ದವು. ಇಲಾಖೆಯವರಿಗೆ ಇದು ಹಬ್ಬದೂಟವೂ ಆಗುತ್ತಿತ್ತು. ಕೆರೆಯ ಹೆಸರಲ್ಲಿ ಎಲ್ಲವೂ ಸರಿ ಹೋಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಎಂಬ ರೋಗಾಣು ಈ ಕೆರೆ ಹೂಳೆತ್ತುವ ಸಂಗತಿಯನ್ನೇ ಇಲ್ಲವಾಗಿಸಿದೆ. ಕೊರೊನಾಕ್ಕೂ ನೀರಿನ ಬವಣೆಯಾಗದಿರುವುದಕ್ಕೂ ಎತ್ತಣದಿಂದೆತ್ತಣದ ಸಂಬಂದವೋ ತಿಳಿಯದು. ಆದರೆ ನೀರಿನ ಸಸ್ಯೆಯಾಗದಿರುವುದಂತೂ ಸುಳ್ಳಲ್ಲ.

ಭಾಗಶಹ ಬೇಸಿಗೆಯಲ್ಲಿ ಅರಣ್ಯ ಪ್ರದೇಶದಲ್ಲಿ ನೀರು ಸಿಗದೇ ಅದೆಷ್ಟೋ ವನ್ಯಪ್ರಾಣೀಗಳು ನಾಡಿನ ಕಡೆಗೆ ಬರುತ್ತಿದ್ದನ್ನುಕಾಣುತ್ತಿದ್ದೆವು.ಚಿಗರೆ, ಜಿಂಕೆಗಳಂತಹ ಹಲವು ಸಣ್ಣ ಪ್ರಾಣಿಗಳು ನಾಡಿನವರೆಗೂ ಬಂದೂ ನಾಯಿಯ ಬಾಯಿಗೆ ತುತ್ತಾಗಿದ್ದನ್ನೂ ನೋಡಿದ್ದೆವು. ಆದರೆ ಈ ಬಾರಿಅಂತಹ ಘಟನೆಗಳು ನಡೆಯಲೇ ಇಲ್ಲ ಎನ್ನಬೇಕು. ಅಂದರೆ ಈ ಬೇಸಿಗೆಯಲ್ಲಿ ಕಾಡಲ್ಲಿ ನೀರಿನ ಸಮಸ್ಯೆಯಾಗಿಲ್ಲವೇ? ಅಥವಾ ಕಾಡು ಪ್ರಾಣಿಗಳಿಗೂ ನಾಡಿಗೆ ಬಂದರೆ ಕೊರೊನಾ ಭಯವಿತ್ತೇ… ತಿಳಿಯದು. ಒಟ್ಟಾರೆ ಈ ಬೇಸಿಗೆಯಲ್ಲಿ ಜಲಕ್ಷಾಮದ ಸಮಸ್ಯೆಯಾಗದಿರುವುದಂತೂ ಸುಳ್ಳಲ್ಲ.

Exit mobile version