ಕುಮಟಾ: ಕುಮಟಾದ ಓರ್ವ ವ್ಯಕ್ತಿಯಲ್ಲಿ ಶುಕ್ರವಾರ ಕೊರೊನಾ ಸೋಂಕು ದೃಡಪಟ್ಟಿದ್ದು, ಇದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ತಲುಪಿದಂತಾಗಿದೆ.
ಮಹಾರಾಷ್ಟ್ರದಿಂದ ಕುಮಟಾಕೆ ಆಗಮಿಸಿದ್ದ 55 ವಷದ ವ್ಯಕ್ತಿಯಲ್ಲಿ ಪಾಸಿಟವ್ ವರದಿ ಬಂದಿದ್ದು, ಈತ ಮಹಾರಾಷ್ಟ್ರದಿಂದ ಬಂದು ನೇರವಾಗಿ ಕ್ವಾರೆಂಟೈನ್‌ಗೆ ಸೇರಿದ್ದ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕಿತ 85 ಜನ ಗುಣಮುಖರಾಗಿ ಹೊರ ಬಂದಿದ್ದಾರೆ. ಉಳಿದ 15 ಜನ ಸೋಂಖಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾಗಶಹ ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬಂದವರಿಂದಲೇ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಈಗಲೂ ಸಹ ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಗಳಿಂದ ಜನರು ಉತ್ತರ ಕನ್ನಡಕ್ಕೆ ಆಗಮಿಸುತ್ತಿದ್ದು, ಇವರಿಂದ ಸೋಂಕು ಇನ್ನಷ್ಟು ಹರಡುವ ಭಯ ಎದುರಾಗಿದೆ.