Site icon ಒಡನಾಡಿ

ಕದ್ರಾ ಜಲಾಶಯ ಗರಿಷ್ಠ ಮಟ್ಟುವ ಸಾದ್ಯತೆ… ಯಾವುದೇ ಸಂದರ್ಭದಲ್ಲಿ ನೀರು ಹೊರ ಬಿಡುವ ಮುನ್ನೆಚ್ಚರಿಕೆ…

ಕಾರವಾರ: ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಿ ನೀರನ್ನು ಜಲಾಶಯದಿಂದ ಹೊರ ಬಿಡುವ ಮುನ್ಸೂಚನೆಯನ್ನು ಕನಾಟಕ ವಿದ್ಯುತ್‌ ನಿಗಮ ನೀಡಿದೆ.

ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀ. ಇದೆ. ಈಗಿನ ಜಲಾಶಯದ ಮಟ್ಟ 31.15 ರಷ್ಟಾಗಿದೆ. ಇದೇ ರೀತಿ ಜಲಾಶಯಕ್ಕೆ ಒಳ ಹರಿವು ಮುಂದುವರೆದಲ್ಲಿ ಕಡಿಮೆ ಜಲ ಸಂಗ್ರಹಣಾ ಸಾಮರ್ಥ್ಯವಿರುವ ಕದ್ರಾ ಜಲಾಶಯ ತನ್ನ ಗರಿಷ್ಠ ಮಟ್ಟವನ್ನು ಶೀಘ್ರವೇ ತಲುಪುವ ಸಾದ್ಯತೆಯಿದೆ. ಹಾಗಾಗಿ ಆಣೆಕಟ್ಟು ಸುರಕ್ಷತಾ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಂದರ್ಭದಲ್ಲಿ ಹೊರಬಿಡಲಾಗುವುದು.

ಜಲಾಶಯದ ಕೆಳದಂಡೆಯಲ್ಲಿ ಹಾಗೂ ನದಿ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರವ ಸಾರ್ವಜನಿಕರು ತಮ್ಮ ಜನ, ಜಾನವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆಂದು, ಹಾಗೂ ಕದ್ರಾ ಆಣೆಕಟ್ಟಿನ ಕೆಳ ಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲದ ಅವಧಿಯಲ್ಲಿ ನಡೆಸದಂತೆ ಕದ್ರಾ ವಿದ್ಯುತ್‌ ನಿಗಮದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version