ಈ ಬದುಕೆ ಹೀಗೆ…
ಚಲಿಸುವ ಬಸ್ಸಿನಂತೆ.
ಪ್ರಯಾಣ ಆರಂಭ,
ಹಡೆದವರು -ಒಡಹುಟ್ಟಿದವರು
ಕರುಳ ಬಳ್ಳಿಯೊಂದಿಗೆ, ಹುಟ್ಟೆಂಬ ನಿಲ್ದಾಣದಿಂದ,
ಬಲು ಅಂದ ಬಲು ಚೆಂದ
ಬಾಲ್ಯದ ಪಯಣ.
ಈ ಬದುಕೆ ಹೀಗೆ,
ಚಲಿಸುವ ಬಸ್ಸಿನಂತೆ.
ಸಾಗಿದಂತೆ ಪಯಣ
ಆಟ ಪಾಠ- ಛಲ ಬಲ
-ಹುಮ್ಮಸ,
ಬಗೆ ಬಗೆಯ ಕನಸಿನ
- ನೋಟ,
ಬಲು ಸೊಗಸು ತಾರುಣ್ಯದ
- ಪಯಣ.
ಈ ಬದುಕೆ ಹೀಗೆ,
ಚಲಿಸುವ ಬಸ್ಸಿನಂತೆ.
ಏರು -ಇಳಿಯುವ ನಡುವೆ,
ಬಂದು ಹೋಗುತ್ತವೆ
ಎಷ್ಟೊ ಮುಖಗಳು,
ಕೆಲವು ಸಾತ್ವಿಕ ಮನಗಳು
ಹಲವು ಸ್ವಾರ್ಥಕ ಮನಸ್ಸುಗಳು
–ಮುರ್ತುಜಾ ಹುಸೇನ, ಆನೆ ಹೊಸೂರ