ಅಂಬಿಕಾನಗರದ ಕನಾಟಕ ವಿದ್ಯುತ್ ನಿಗಮದ ಜನವಸತಿ ಪ್ರದೇಶದ ಬಳಿ ಬಂದು ಜನರ ಆತಂಕಕ್ಕೆ ಕಾರಣವಾಗಿದ್ದ ಸರಿ ಸುಮಾರು ಏಳು ಅಡಿ ಉದ್ದದ ಹೆಬ್ಬಾವನ್ನು ಹಿಡಿದ ಆಸ್ಲಾಂ ಅಬ್ಬಾಸ ಅಲಿ ಕಾರ್ಪೆಂಟರ್ ಅದನ್ನು ಚೀಲದಲ್ಲಿ ಹಾಕಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ವೃತ್ತಿಯಲ್ಲಿ ವಿದ್ಯುತ್ ನಿಗಮದ ಆಸ್ಪತ್ರೆ ವಾಹನದ ಹಂಗಾಮಿ ಚಾಲಕನಾಗಿದ್ದು, ಈತ ಉರಗ ಪ್ರೇಮಿಯಾಗಿದ್ದಾನೆ.