Site icon ಒಡನಾಡಿ

ದೇವಾಲಯಗಳಲ್ಲಿ ಇನ್ನು ಮುಂದೆ ತೀರ್ಥ- ಪ್ರಸಾದವಿಲ್ಲ

ಬೆಂಗಳೂರು: ಲಾಕ್ ಡೌನ್ ಬಳಿಕ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆಯಾದರೂ ಕೆಲವು ನಿರ್ಬಂಧಗಳನ್ನೂ ಹೇರಲಾಗಿದೆ.

ರಾಜ್ಯದ ಎಲ್ಲಾ ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ್ಟವರಿಗೆ, 10 ವರ್ಷ ಒಳಗಿನವರಿಗೆ ಪ್ರವೇಶವಿಲ್ಲ. ತೀರ್ಥ-ಪ್ರಸಾದ ನೀಡುವಂತಿಲ್ಲ. ಪ್ರಸಾದ ಭೋಜನ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದೇವರ ದರ್ಶನ ಸಮಯದಲ್ಲೂ ಸಾಮಾಜಿಕ ಅಂತರವಿರಬೇಕು.

ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಈಗಾಗಲೇ ಈ ಬಗ್ಗೆ ದೇವಾಲಯದ ಪರಿಸರದಲ್ಲೇ ಸೂಚನಾ ಫಲಕವನ್ನೂ ನೀಡಲಾಗಿದೆ. ಸ್ಯಾನಿಟೈಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಸಹ ಸರಕಾರದ ನಿಯಮ ಅನ್ವಯವಾಗುತ್ತದೆ. ಈಗಾಗಲೇ ಹಲವು ದೇವಸ್ಥಾ ಸಮಿತಿಯವರು ಸಭೆ ನಡಸಿ ತಮ್ಮ ಮುಂಜಾಗೃತಾ ಕ್ರಮಗಳ ಬಗ್ಗೆಯೂ ತಾವೇ ನಿಯಮ ಹಾಕಿಕೊಂಡಿರುವುಸಹ ಗೊತ್ತಾಗಿದೆ. ಸರಕಾರದ ನಿಯಮ ಎಲ್ಲರಿಗೂ ಕಟ್ಟು ನಿಟ್ಟಾಗಿ ಅನ್ಯವಾಗುತ್ತದೆ ಎಂದು ತಿಳಿಸಲಾಗಿದೆ.

Exit mobile version