Site icon ಒಡನಾಡಿ

ಲಾಕ್ಡೌನ್ ನಲ್ಲಿ ರೆಸಾರ್ಟ ಕಳ್ಳತನ ಮಾಡಿದ ಕೆಲಸಗಾರರು: ಬಂಧನ

ದಾಂಡೇಲಿ: ಲಾಕ್‍ಡೌನ್ ಸಮಯದಲ್ಲಿ ತಾವು ಕೆಲಸಕ್ಕಿದ್ದ ರೆಸಾರ್ಟನ ಬೆಲೆ ಬಾಳುವ ಸಾಮಾನುಗಳನ್ನೇ   ಕಳ್ಳತನ ಮಾಡಿದ ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. 

  ದಾಂಡೇಲಿಗೆ ಹತ್ತಿರದ ಕೋಗಿಲಬನದಿಂದ ಅನತಿ ದೂರದಲ್ಲಿರುವ ಡ್ರಿವ್‍ಡ್ರಾಪ್ ರೆಸಾರ್ಟನಲ್ಲಿ ಈ ಘಟನೆ ನಡೆದಿದೆ.  ಇಲ್ಲಿ ಕೆಲಸಕ್ಕಿದ್ದ  ಕುಮಾರ ದೊಡ್ಮನಿ ಹಾಗೂ ಆಸ್ಟಿನ್ ಖಾನಾಪುರ ಎಂಬವರೇ ಕಳ್ಳತನ ನಡೆಸಿದ ಆರೋಪಿಗಳಾಗಿದ್ದಾರೆ. ಲಾಕ್‍ಡೌನ್ ಆಗಿದ್ದರಿಂದ ರೆಸರ್ಟನಲ್ಲಿ ಕೆಲಸಗಾರರ ಸಂಖ್ಯೆ ಕಡಿಮೆಯಿತ್ತು. ಇವರನ್ನಷ್ಟೇ  ರೆಸರ್ಟ ನೋಡಿಕೊಳ್ಳಲು ಇಡಲಾಗಿತ್ತು. ಈ ನಡುವೆ ಇವರು ಮಾಲಕರ ಜೊತೆ ತಗಾದೆ ತೆಗೆದು ಕೆಲಸದಿಂದ ಹೊರಗಿದ್ದರೆಂಬ ಮಾಹಿತಿಯಿದೆ. ಇವರು ರೆಸಾರ್ಟನಲ್ಲಿ  ಯಾರೂ ಇಲ್ಲದ್ದನ್ನು ಗಮನಿಸಿ ಅಲ್ಲಿದ್ದ  ಎರಡು ಟಿವಿ,  ಒಂದು ಪ್ರಿಜ್, ಒಂದು ಟಿಪಾಯಿ, ಎರಡು ಬೆಡ್ ಹಾಗೂ ಬ್ಲೆಂಕೈಟ್ಸ್‍ಗಳನ್ನು ಕಳ್ಳತನ ಮಾಡಿದ್ದರು. ಕಳ್ಳತನ  ಮಾಡಿದ ಈ ಎಲ್ಲ ಸಾಮಾನುಗಳನ್ನು ಇವರು ತಮ್ಮ ಸಂಬಂಧಿಯೋರ್ವರ ಮನೆಯಲ್ಲಿಟ್ಟಿದ್ದರು. 

   ಕಳ್ಳತನ ನಡೆದ ವಿಷಯ ತಿಳಿದ ರೆಸಾರ್ಟನ ಮಾಲಕ ಅನಿಲ್ ಪಾಟ್ನೇಕರವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪಿ.ಎಸ್.ಐ ಹನ್ಮಂತ ಬಿರಾದರವರು ರೆಸಾರ್ಟನ ಸಿಸಿ ಟಿವಿ ಕ್ಯಾಮರಾದ ಮಾಹಿತಿಯ ಮೇರೆಗೆ ಕಳ್ಳತನ ನಡೆಸಿದವರನ್ನು ಪತ್ತೆ ಹಚ್ಚಿದ್ದಾರೆ. ಇವರಲ್ಲಿ ದಾಂಡೇಲಿಯ  ಕುಮಾರ ದೊಡ್ಮನಿ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಖಾನಾಪುರದ ಆಸ್ಟಿನ್ ಎಂಬಾತ ಪರಾರಿಯಾಗಿದ್ದಾನೆ. ಸಿ.ಪಿ.ಐ ಪ್ರಭು ಗಂಗನಳ್ಳಿ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಹನ್ಮಂತ ಬಿರಾದರ ಮುಂದಿನ ತನಿಖೆ ನಡೆಸುತ್ತಿದ್ದಾರೆ. 

Exit mobile version