ದಾಂಡೇಲಿ: ಮಳೆಗಾಲ ಸಮೀಪಿಸುತ್ತಿದ್ದು ಅದಕ್ಕೂ ಮುನ್ನ ಆಗಬೇಕಾದ ಅವಶ್ಯ ಕೆಲಸಗಳನ್ನು ತಕ್ಷಣ ಮುಗಿಸಿಕೊಳ್ಳಿ. ಮಳೆಗಾಲದಲ್ಲಿ ಯಾವ ಸಮಸ್ಯೆಯಾಗದಂತೆ ಸಿದ್ದತೆ ಮಾಡಿಕೊಳ್ಳಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದರು. ಕೊರೊನಾ ಲಾಕ್‍ಡೌನ್ ಮೂರನೆ ಹಂತದಲ್ಲಿ ಸಡಿಲಿಕೆಯಾಗಿದೆ. ಈಗ ರೈತಾಪಿ, ತೋಟಗಾರಿಕೆ, ಹಾಗೂ ಅಭಿವೃದ್ದಿ ಕೆಲಸಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ ನೋಡಿಕೊಳ್ಳಲಾಗಿದೆ. ನಗರದಲ್ಲಿಯೂ ಆಗಬೇಕಾದ ಎಲ್ಲ ರಸ್ತೆ, ಗಟಾರ ಸೇರಿದಂತೆ ಎಲ್ಲ ಅಭೀವೃದ್ದಿ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಮಳೆಗಾಲದಲ್ಲಿ ತೊಂದರೆಯಾಗದ ಹಾಗೆ ಜಾಗೃತಿ ವಹಿಸಬೇಕು. ಈ ಸಂದರ್ಭಧಲ್ಲಿ ಎಲ್ಲರೂ ಪಕ್ಷಬೇಧ ಮರೆತು ಅಭಿವೃದ್ದಿಗೆ ಸಹಕರಿಸಬೇಕು. ನಗರಸಭೆಯಲ್ಲಿ ಇನ್ನೂ ಸಹ ಅಧ್ಯಕ್ಷ ಉಪಾಧ್ಯಕ್ಷರಿಲ್ಲದಿರುವುದರಿಂದ ಇರುವ 31 ಸದಸ್ಯರೂ ಸಹ ಜವಾಬ್ದಾರಿಯಿಂದ ಕೆಲಸಮಾಡಬೇಕು
ಸರಕಾರಿ ಆಸ್ಪತ್ರೆಯ ವ್ಯವಸ್ಥೆ ಮತ್ತು ಸೌಲಭ್ಯಗಳು, ಮಿನಿ ವಿಧಾನ ಸೌಧ, ಜಿ ಪ್ಲಸ್ ಟು ಕಟ್ಟಡ, ಒಳಚರಂಡಿ ಹಾಗೂ ನಗರೋತ್ಥಾನ ಕೆಲಸ, ಸರಕಾರಿ ಪದವಿ ಕಾಲೇಜಿನ ಕಟ್ಟಡ ಸೇರಿದಂತೆ ಹಲವು ಅಭಿವೃದ್ದಿ ಕೆಲಸಗಳ ಬಗ್ಗೆ ಸಂಬಮಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ತಕ್ಷಣ ಕೆಲಸ ಮುಗಿಸಲು ನಿರ್ದೇಶಿಸಿದರು.
ಸಭೆಗೂ ಆರಂಭದಲ್ಲಿ ಕೊರೊನಾ ನಿಯಂತ್ರ್ರಣದ ಕುರಿತಂತೆ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ದೇಶಪಾಂಡೆಯವರು ಇಲ್ಲಿಯವರೆಗೂ ಸ್ಥಳೀಯ ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಸಿಬ್ಬಂದಿಗಳು, ಪೊಲೀಸ್ ಹಾಗೂ ಎಲ್ಲ ಇಲಾಖಾ ಸಿಬ್ಬಂದಿಗಳ ಪ್ರಾಮಾಣಿಕ ಕಾರ್ಯದಿಂದಾಗಿ ಕೊರೊನಾ ಈ ಭಾಗಕ್ಕೆ ಬರದಿರಲು ಸಾಧ್ಯವಾಗಿದೆ ಎಂದು ಹೇಳಿ ಅಧಿಕಾರಿಗಳನ್ನು ಅಭಿನಂದಿಸಿದರು. ವಯೋವೃದ್ದರು, ಮಕ್ಕಳು ಕಾಳಜಿಯಿಂದಿರುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ, ಡಿ.ವೈ.ಎಸ್.ಪಿ ಮೋಹನಪ್ರಸಾಧ, ತಾಲೂಕು ಆರೋಗ್ಯಾಧಿಕಾರಿ ಡಾ. ರಮೇಶ ಕದಂ, ದಾಂಡೇಲಿ ವೈದ್ಯಾಧಿಕಾರಿ ರಾಜೇಶ ಪ್ರಸಾದ್, ಸಿ.ಪಿ.ಐ ಪ್ರಭು ಗಂಗನಳ್ಳಿ ಮುಂತಾದವರಿದ್ದರು.
ಗೃಹರಕ್ಷಕರು, ಪೋಟೋಗ್ರಾಫರ್ ಬ್ಯೂಟಿ ಪಾರ್ಲರಗಳಿಗೆ ಕಿಟ್ ನೀಡಿದ ದೇಶಪಾಂಡೆ
ದಾಂಡೇಲಿ: ನಗರದ ಗೃಹರಕ್ಷಕದಳದ ಸಿಬ್ಬಂದಿಗಳು, ಪೋಟೋಗ್ರಾಫರ್‍ಗಳು, ಬ್ಯೂಟಿ ಪಾರ್ಲರ ಹಾಗೂ ಲಾಂಡ್ರಿ ನಡೆಸುವವರಿಗೆ ಶಾಸಕ ಆರ್.ವಿ. ದೆಶಪಾಂಡೆಯವರು ಶುಕ್ರವಾರ ಆಹಾರ ಸಾಮಗ್ರಿಗಳ ಕಿಟ್ ನೀಡಿದರು.