ಕೊರೊನಾ ಸಂಕಷ್ಠ ಕಾಲದ ಕಾರಣ ನೀಡಿ ನಮ್ಮ ಬಿಲ್ಲುಗಳ ಬಟಾವಡೆಯಾಗುತ್ತಿಲ್ಲ. ಗುತ್ತಿಗೆದಾರರೂ ಸಹ ಸಂಕಷ್ಠದಲ್ಲಿದ್ದು ತಕ್ಷಣ ಅವರು ಮಾಡಿದ ಕೆಲಸಗಳ ಬಿಲ್‍ಗಳನ್ನು ಬಟಾವಡೆ ಮಾಡುವಂತೆ ನಿರ್ದೇಶನ ನೀಡುವಂತೆ ಕೆನರಾ ಲೋಕೋಪಯೋಗಿ ಸಂಘದವರು ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರವರಿಗೆ ಮನವಿ ನೀಡಿದರ
ಕೆಲಸ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಸುಮಾರು 3 ತಿಂಗಳಿಂದ ಬಿಲ್ಲುಗಳು ಪಾವತಿಯಾಗಿರುವುದಿಲ್ಲ. ನಗರಸಭೆಯಲ್ಲಿ ಹಣ ಇದ್ದರೂ ಖಜಾನೆಯಲ್ಲಿ ಸರ್ಕಾರಿ ನೌಕರರ ವೇತನ ಮಾತ್ರ ಪಾವತಿಸಲು ಅನುಮತಿಯಿರುವುದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೆಲಸವಿಲ್ಲದ ಸಮಯದಲ್ಲೂ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವುದರ ಮೂಲಕ ಸಾಕಷ್ಟು ಸಹಾಯ ಮಾಡುತ್ತಿರುವ ಗುತ್ತಿಗೆದಾರರು ಬರಬೇಕಾದ ಬಿಲ್ ಪಾವತಿಯಾಗದಿರುವುದರಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ.
ಗುತ್ತಿಗೆದಾರರು ಸರ್ಕಾರದಿಂದ ಯಾವುದೇ ಆರ್ಥಿಕ ಪ್ಯಾಕೇಜ್ ಅಪೇಕ್ಷಿಸಿರುವುದಿಲ್ಲ. ಆದರೆ ಬರಬೇಕಾದ ಬಿಲ್ಲುಗಳನ್ನು ತಕ್ಷಣವೇ ಬಿಡುಗಡೆ ಮಾಡಿದರೆ ಉಪಕಾರ ಮಾಡಿದಂತಾಗುತ್ತದೆ. ಕೂಡಲೆ ಬಿಲ್ ಮೊತ್ತ ಪಾವತಿಯಾದರೆ ಈಗಾಗಲೆ ಅರ್ಧಕ್ಕೆ ನಿಂತಿರುವ ಮತ್ತು ಹೊಸ ಕಾಮಗಾರಿಗಳನ್ನು ಪ್ರಾರಂಭ ಮಾಡಲು ಕಾರ್ಮಿಕರಿಗೆ, ಸಿಬ್ಬಂದಿಗೆ, ನಮಗೆ ಸಾಲ ಕೊಟ್ಟಿರುವ ಕಟ್ಟಡ ಸಾಮಗ್ರಿ ಅಂಗಡಿಗಾರರಿಗೆ ಬಾಕಿ ಪಾವತಿಸಲು ಅನುಕೂಲವಾಗುತ್ತದೆ. ಕಾರಣ ಸಚಿವರು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗುತ್ತಿಗೆದಾರರ ಬಿಲ್ಲುಗಳನ್ನು ಪಾವತಿಸಲು ಖಜಾನೆಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ಯಾಮ್ ಭಟ್ ಶಿರಸಿ, ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೈಯದ್ ಕೆ.ತಂಗಳ್, ಕಾರ್ಯದರ್ಶಿ ಬಿ.ಎಲ್.ಲಮಾಣಿ, ಖಜಾಂಚಿ ಕೆ.ಸುಧಾಕರ ರೆಡ್ಡಿ, ಸಂಘದ ಪದಾಧಿಕಾರಿಗಳಾದ ಚಂದ್ರು ಕೋಕಣಿ, ಎನ್.ಶಶಿಧರನ್, ದೇವಾನಂದ ಆರ್.ಸಿ, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.