ದಾಂಡೇಲಿಯ ಬಂಗೂರನಗರ ಕಾಲೇಜಿನ ಜೆ.ಓ.ಸಿ.ವಿಭಾಗದ 1993-94 ನೇ ಸಾಲಿನ ಕ್ಷ ಕಿರಣ ತಂತ್ರಜ್ಞ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
1993-94 ರ ನಲ್ಲಿ ದಾಂಡೇಲಿ ಬಂಗೂರನಗರ ಕಾಲೇಜಿನಲ್ಲಿ ಕ್ಷ ಕಿರಣ ತಂತ್ರಜ್ಞಾನ ವಿಭಾಗದಲ್ಲಿ ಕಲಿತ ವಿದ್ಯಾರ್ಥಿಗಳ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ನಾವು ಇಂದು ಬದುಕಿನಲ್ಲಿ ಉತ್ತಮ ಸ್ಥಾನಮಾನ ಗಳಿಸಿಕೊಂಡು ಸಮಾಜಕ್ಕೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದು ಈಗ ಮತ್ತೆ ಆ ಹಳೆ ನೆನಪುಗಳನ್ನು 32 ವರ್ಷಗಳ ನಂತರ ನೆನಪಿಸಿಕೊಳ್ಳುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಎನ್. ವಿ. ಪಾಟೀಲ, ನಿವೃತ್ತ ಲೆಕ್ಕಿಗ ಶ್ರೀಮಂತ ಮದರಿ ಇವರುಗಳನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಹನುಮಂತೆ, ಮತೀನ ಮುಲ್ಲಾ , ಮೊಹಮದ್ ಶೇಖ, ಶ್ರೀಕಾಂತ ಕಲ್ಲೂರ, ಬಸವರಾಜ ಮಾಶಾಳ, ಉಮೇಶ ಕಾಂಬಳೆ, ಸೈಪುದ್ದೀನ ರಾಜನಾಳ, ಸುಜಾತಾ ಮುಳೆ, ಸುಶಿಲಾ.ಎಸ್, ಸುನೀಲ ಮಯೇಕರ್ ಬಸವರಾಜ ಭಾವಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
