Site icon ಒಡನಾಡಿ

ಭಾವನಾಬಾಯಿ ಹಜಾರೆ ಇನ್ನಿಲ್ಲ

ದಾಂಡೇಲಿಯ ಅಜಾದ ನಗರದ ಶಿವಾಜಿಗಲ್ಲಿಯ ನಿವಾಸಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ. ಶಂಕರಸಿಂಗ್ ಹಜಾರೆಯವರ ಧರ್ಮಪತ್ನಿ ಭಾವನಾಬಾಯಿ ಶಂಕರಸಿಂಗ್ ಹಜಾರೆ (92) ರವಿವಾರ ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ.

ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದ ಭಾವನಾಬಾಯಿಯವರು ಪರೋಪಕಾರಿ ಗುಣವುಳ್ಳವಾಗಿದ್ದರು. ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಮೋಹನ ಹಲವಾಯಿಯವರ ದೊಡ್ಡಮ್ಮ ಆಗಿರುವ ಮೃತರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸೋಮವಾರ ಮುಂಜಾನೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Exit mobile version