Site icon ಒಡನಾಡಿ

ದಾಂಡೇಲಿ ನಗರಸಭೆ ಸ್ಥಾಯಿ ಸಮಿತಿಯ  ನೂತನ ಅಧ್ಯಕ್ಷರಾಗಿ ಸುಧಾ ಜಾಧವ

filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: 32768; cct_value: 0; AI_Scene: (0, -1); aec_lux: 275.91193; hist255: 0.0; hist252~255: 0.0; hist0~15: 0.0;

ದಾಂಡೇಲಿ: ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ವಾರ್ಡ್ ನಂಬರ್ 17ರ ಸದಸ್ಯೆ ಸುಧಾ ರಾಮಲಿಂಗ ಜಾಧವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ದಾಂಡೇಲಿ ನಗರಸಭೆಯ ಸಭಾಭವನದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಸಭಾಪತಿ ಸುಧಾ ಜಾಧವರವರು ಹಳೆ ದಾಂಡೇಲಿ ಭಾಗದ ಸದಸ್ಯರಾಗಿದ್ದು, ಮೊದಲಬಾರಿಗೆ ಆಯ್ಕೆಯಾದವರು. ಇವರ ಪತಿ ರಾಮಲಿಂಗ ಜಾದವ್ ಈ ಹಿಂದೆ ನಗರಸಭಾ ಸದಸ್ಯರಾಗಿ, ನಾಮ ನಿರ್ದೇಶಿತ ಸದಸ್ಯರಾಗಿ ಕಾರ್ಯ ನಿರ್ವಹಿಸಿದವರು.

ಸ್ಥಾಯಿ ಸಮಿತಿಯ ಇನ್ನುಳಿದ ಸದಸ್ಯರಾದ
ಸುಗಂಧಾ ಕಾಂಬಳೆ, ರುಕ್ಮಿಣಿ ಬಾಗಡೆ, ರುಹಿನಾ ಖತೀಬ, ಸಪೂರಾ ಯರಗಟ್ಟಿ, ವೆಂಕಟರಮಣಮ್ಮ ಮೈತಕುರಿ, ಮಹಾದೇವ ಜಮಾದರ, ಮಜೀದ ಸನದಿ, ಸಂಜಯ, ನಂದ್ಯಾಳಕರ,
ನಂದೀಶ್ ಮುಂಗರವಾಡಿ, ಆಸಿಪ್ ಮುಜಾವರ ಇದ್ದರು

ಆಯ್ಕೆಯ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಮುಖಂಡರಾದ ಆರ್. ಪಿ. ನಾಯ್ಕ್, ಅಬ್ದುಲ್ ಕರೀಂ ಅಜರೇಕರ್, ದಿವಾಕರ್ ನಾಯ್ಕ್, ನಗರ ಸಭೆಯ ಮಾಜಿ ಅಧ್ಯಕ್ಷರಾದ ಯಾಸ್ಮಿನ್ ಕಿತ್ತೂರ್, ಸರಸ್ವತಿ ರಜಪೂತ್, ಸದಸ್ಯರಾದ ಅನಿಲ ನಾಯ್ಕರ ಹಾಗೂ ಕಾಂಗ್ರೆಸ್ ಪಕ್ಷದ ಇತರೆ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಕರಾವಳಿ ಮಂಜಾವು ಅವರ ಜೊತೆ ಮಾತನಾಡಿದ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸುಧಾ ಜಾಧವ್ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ನಗರಸಭಾ ಸದಸ್ಯರ ಸಹಕಾರದೊಂದಿಗೆ ನಗರದ ಅಭಿವೃದ್ಧಿ ಕೆಲಸಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

Exit mobile version