Site icon ಒಡನಾಡಿ

ದಾಂಡೇಲಿಯಲ್ಲಿ ಸರಣಿಗಳ್ಳತನ ನಡೆಸಿದ್ದ ಅಂತರಾಜ್ಯ ಕಳ್ಳರ ಬಂಧನ

ದಾಂಡೇಲಿ : ನಗರದ ಲಿಂಕ ರಸ್ತೆಯಲ್ಲಿ ಸರಣಿಗಳತನ ನಡೆಸಿದ್ದ ಅಂತರಾಜ್ಯ ಇಬ್ಬರು ಕಳ್ಳರನ್ನು ದಾಂಡೇಲಿಯ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಹಸನ್ ಸಾಬ್ ಬೇಗ್ , ಹಳಿಯಾಳದ ಆಸಿಫ್ ಬೇಗ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದ ಸೆಪ್ಟೆಂಬರ್ 19ರಂದು ದಾಂಡೇಲಿಯ ಲಿಂಕ್ ರಸ್ತೆಯಲ್ಲಿ ನಾಲ್ಕು ಅಂಗಡಿಗಳಲ್ಲಿ ಒಂದೇ ದಿನ ಕಳ್ಳತನ ನಡೆದಿತ್ತು. ಲಿಂಕ್ ರಸ್ತೆಯ ಅಭಿಷೇಕ್ ಕಾಳೆ ಎಂಬವರ ಅಂಗಡಿಯಲ್ಲಿ ನಾಲ್ಕು ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಒಡವೆಗಳು, ಶರಣ ಅರಳಿ ಎನ್ನುವರ ಕಿರಾಣಿ ಅಂಗಡಿಯಿಂದ 50 ಸಾವಿರ ರು. ನಗದು, ವಿಷ್ಣು ಕಲಾಲ್ ಅವರ ಮೈಲಾರ ಬಾರ್ ನಿಂದ 35 ಸಾವಿರ ರು. ನಗದು ಕಿರಣ್ ಎನ್ನುವರ ಅಂಗಡಿಯಿಂದ ನಗದು ಹಣವನ್ನು ದೋಚಿದ್ದ ಕಳ್ಳರು ಪರಾರಿಯಾಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದಾಂಡೇಲಿ ನಗರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಕಳ್ಳತನ ನಡೆದ ನಡೆಸಿದ ಸ್ಥಳಕ್ಕೆ ಆರೋಪಿಗಳ ಜೊತೆ ಪರಿಶೀಲನೆ ನಡೆಸಿದ ಪೊಲೀಸರು ಕಳ್ಳತನ ನಡೆಸಿದ ಒಂದಿಷ್ಟು ವಸ್ತುಗಳನ್ನು ವಶಪಡಿಸಿಕೊಂಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಬಂಧಿತರಿಂದ ವಶಪಡಿಸಿಕೊಂಡಿದ್ದು …

1,70,000 ರು ನಗದು, ಬಂಗಾರದ ಮಂಗಳ ಸೂತ್ರ -1, ಬಂಗಾರದ ಕಿವಿ ಓಲೆ-2 ಜೊತೆ, ಬಂಗಾರದ ಚೈನ್ -1, ಬಂಗಾರದ ಕರಿಮಣಿ ಸರ-1, ಬೆಳ್ಳಿಯ ಕಡಾ-1, ಬೆಳ್ಳಿಯ ಉಂಗುರ -1, ಸಿ.ಸಿ ಕ್ಯಾಮರಾದ ಯು.ಪಿ.ಎಸ್ ಚಾರ್ಜರ ಬಾಕ್ಸ್, ಲಾವಾ ಕೀ ಪ್ಯಾಡ್ ಮೋಬೈಲ್ ಪೋನ್-2, ರಿಯಲ್ ಮೀ ಮೋಬೈಲ್ ಪೋನ್-1, ಐಟೇಲ್ ಕೀಪ್ಯಾಡ್ ಮೋಬೈಲ್ ಪೋನ್-2 , ಬೈಕ್ ಕೀ, ಕಬ್ಬಿಣದ ಸಣ್ಣ ರಾಡ್-1, ಹೈವಾರ್ಡ್‌ ಸರಾಯಿ ಖಾಲಿ ಟೆಟ್ರಾ ಪ್ಯಾಕೇಟ್-2 ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Exit mobile version