ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಕೇಸ್ ವರ್ಕರ್ ಆಗಿರುವ ಕಾಶೀನಾಥ್ ಬಾಡನ್ಕರ್ ಅವರು ಜುಲೈ 31 ರಂದೇ ವರ್ಗಾವಣೆಗೊಂಡಿರುವ ಆದೇಶ ಬಂದಿದ್ದರೂ ಸಹ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಅವರಿಗೆ ವರ್ಗಾವಣೆ ಆದೇಶ ಪತ್ರ ನೀಡಿಲ್ಲ ಎಂದು ಭಾಜಪ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಭೀಮಶಿ ಬಾದುರ್ಲಿ ಆಕ್ಷೇಪಿಸಿದ್ದಾರೆ.
ಈ ವಿಚಾರವಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳನ್ನು ವಿಚಾರಿಸಿದರೆ ಅವರು ಇಲಾಖೆಯಲ್ಲಿ ಬಾಕಿ ಉಳಿದಿರುವ ಲೆಕ್ಕಪತ್ರಗಳನ್ನು ಸರಿಪಡಿಸಿ ಹೋಗಲಿ ಅಂತ ಇಟ್ಟುಕೊಂಡಿದ್ದೇನೆ ಎನ್ನುತ್ತಾರೆ. 15 ದಿನ ಕಳೆದರೂ ಲೆಕ್ಕಪತ್ರ ಮುಗಿಯುತ್ತಿಲ್ಲ ಅಂದರೆ ಇವರು ಭ್ರಷ್ಟಾಚಾರ ಮಾಡಿರುವ ಸಂಶಯ ಬರುತ್ತಿದೆ. ಇವರೇ ಮುಂದುವರೆದರೆ ಹಗರಣಗಳನ್ನ ಹಾಗೂ ಕಂಪ್ಯೂಟರ್ನಲ್ಲಿರುವ ಡಾಟಾಗಳನ್ನು ಡಿಲೀಟ್ ಮಾಡುವ ಪ್ರಯತ್ನ ಮಾಡಬಹುದಾಗಿದೆ.
ವರ್ಗಾವಣೆ ಆದ ನಂತರ ಯಾವ ಇಲಾಖೆಯು ಅಧಿಕಾರಿಗಳನ್ನು ಇಟ್ಟುಕೊಳ್ಳುವುದಿಲ್ಲ. ಇವರನ್ನು ವರ್ಗಾವಣೆಹ ಮಾಡದೆ ಇದ್ದ ಪಕ್ಷದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಭೀಮಶಿ ಬಾದುರ್ಲಿ ತಿಳಿಸಿದ್ದಾರೆ