Site icon ಒಡನಾಡಿ

ಅನ್ನಪ್ರಸಾದವಿಲ್ಲ: ಅಂಗಡಿ-ಮಳಿಗೆಗಳಿಲ್ಲ : ಸರಳ ರೀತಿಯಲ್ಲಿ ನಡೆಯಲಿದೆ ದಾಂಡೇಲಪ್ಪ ಜಾತ್ರೆ: ರಾಮಲೀಲಾ ಉತ್ಸವ

ಅನ್ನಪ್ರಸಾದವಿಲ್ಲ, ಅಂಗಡಿ ಮಳಿಗೆಗಳಿಲ್ಲ. ಮನರಂಜನೆಯಂತೂ ಇಲ್ಲವೇ ಇಲ್ಲ. ಕೇವಲ ದೇವರ ದರ್ಶನಕಷ್ಟೇ ಭಕ್ತರಿಗೆ ಅವಕಾಶ ನೀಡುವ ಮೂಲಕ ಸತ್ಪುರುಷ ದಾಂಡೇಲಪ್ಪ ಜಾತ್ರೆಗೆ ತಾಲೂಕಾಡಳಿತ ಸಮ್ಮತಿ ಸೂಚಿಸಿದೆ.


ದಾಂಡೇಲಿ ಹಾಗೂ ಸುತ್ತ ಮುತ್ತಲಿನ ಜನರಿಗೆ ದಾಂಡೇಲಪ್ಪ ಎಂದರೆ ಆರಾದ್ಯ ದೈವ. ಪ್ರತೀ ವಿಜಯಯದಶಮಿಯಂದೇ ನಡೆಯುವ ದಾಂಡೇಲಪ್ಪ ಜಾತ್ರೆ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳಲ್ಲೊಂದು. ಕೋವಿಡ್ ಕಾರಣದಿಂದ ಕಳೆದ ವರ್ಷ ಬಹಳ ಸರಳವಾಗಿ ಈ ಜಾತ್ರೆ ಆಚರಣೆಯಗಿತ್ತು. ಈಬಾರಿ ಜಾತ್ರೆಗೆ ಅವಕಾಶ ಸಿಗುತ್ತದೋ, ಇಲ್ಲವೋ ಎಂಬ ಆತಂಕ ಕೂಡಾ ಭಕ್ತರಲ್ಲಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಸಂಭ್ರಮ ಮತ್ತು ವಿಜ್ರಂಬಣೆಗೆ ಅವಕಾಶ ನೀಡದೇ ಕೊನೆಗೂ ಸರಳ ರೀತಿಯ ಜಾತ್ರೋತ್ಸವ ಆಚರಣೆಗೆ ಸಮ್ಮತಿ ಸಿಕ್ಕಂತಾಗಿದೆ.

ತಹಶೀಲ್ದಾರರ ನೇತೃತ್ವದಲ್ಲಿ ಜಾತ್ರ್ಯೋತ್ಸವ ಪೂರ್ಭಾವಿ ಸಭೆ

ಇದೇ ವಿಚಾರವಾಗಿ ತಹಶೀಲ್ದಾರ ಶೈಲೇಶ ಪರಮಾನಂದರವರ ನೇತೃತ್ವದಲ್ಲಿ, ಡಿ.ವೈ.ಎಸ್.ಪಿ ಕೆ.ಎಲ್. ಗಣೇಶ್, ಸಿ.ಪಿ.ಐ. ಪ್ರಭು ಗಂಗನಳ್ಳಿಯವರ ಉಪಸ್ಥಿತಿಯಲ್ಲಿ , ಆಲೂರು ಗ್ರಾಮ ಪಂಚಾಯತ ಹಾಗೂ ಜಾತ್ರೋತ್ಸವ ಸಮಿತಿಯವರ ಜೊತೆ ಬುಧವಾರ ಸಂಜೆ ಸಭೆ ನಡೆದಿತ್ತು. ಸಭೆಯಲ್ಲಿ ತಹಶೀಲ್ದರಾದ ಶೈಲೇಶ ಪರಮಾನಂದರವರು ಸರಕಾರದ ನಿರ್ದೇಶನದಂತೆ ಜಾತ್ರೆ ಹಾಗೂ ಎಲ್ಲ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಪಾಲಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಸರಕಾರದ ನಿರ್ದೇಶನ ಕೊವಿಡ್ ನಿಯಮಾವಳಿಗಳ ಪ್ರಕಾರ ಜಾತ್ರೆಗೆ ಅವಕಾಶ ನೀಡಲಾಗುವುದು. ಯಾವುದೇ ರೀತಿಯ ವ್ಯಾಪಾರಿ ಮಳಿಗೆಗನ್ನು ಹಾಕುವಂತಿಲ್ಲ. ಅನ್ನಪ್ರಸಾದ ಮಾಡುವಂತಿಲ್ಲ. ಮನರಂಜಾ ಕಾರ್ಯಕ್ರಮ ನಡೆಯುವಂತಿಲ್ಲ. ಹೆಚ್ಚಿನ ಜನ ಸೇರದೇ ಕೇವಲ ದೇವರ ದರ್ಶನ ಮಾಡಿ ಭಕ್ತರು ಹೋಗುವಂತಾಗಬೇಕು. ದರ್ಶನಕ್ಕೆ ಬರುವವ ಪ್ರತಿಯೊಬ್ಬ ಭಕ್ತರೂ ಮಾಸ್ಕನ್ನು ಕಡ್ಡಾಯವಾಹಿ ಧರಿಸಬೇಕು ಎಂದು ತಿಳಿಸಿದರು.


ಡಿ.ವೈ.ಎಸ್.ಪಿ. ಕೆ.ಎಲ್. ಗಣೇಶರವರೂ ಸಹ ಕೋವಿಡ್ ನಿಯಮ ಪಾಲನೆ ಹಾಗೂ ಜಾತ್ರೋತ್ಸವ ಕಮಿಟಿಯವರು ವಹಿಸಬೇಕಾದ ಅಗತ್ಯ ಮುಂಜಾಗೃತೆಗಳ ಬಗ್ಗೆ ತಿಳಿಸಿದರು. ಇದಕ್ಕೆ ಆಲೂರು ಗ್ರಾಮ ಪಚಾಯತ ಹಾಗೂ ಜಾತ್ರೋತ್ಸವ ಸಮಿತಿಯವರೂ ಕೂಡಾ ಸಮ್ಮತಿಸಿದರು.

ರಾಮಲೀಲಾ

ಸಾಂಕೇತಿಕವಾಗಿ ರಾಮಲೀಲಾ ಉತ್ಸವ
ವಿಜಯದಶಮಿಯಂದೇ ನಡೆಯುವ ರಾಮಲೀಲಾ ಉತ್ಸವವನ್ನು ಕೂಡಾ ಈ ವರ್ಷ ಕೇವಲ ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಕೇವಲ 40 ರಿಂದ 50ಜನ ಸೇರಿ ಡಿಲಕ್ಸ್ ಮೈದಾನದಲ್ಲಿ ರಾಮಲೀಲಾ ಉತ್ಸವವನ್ನು ಸಾಂಕೇತಿಕವಾಗಿ ನಡೆಸಲಾಗುವುದು. ಯಾವುದೇ ಮನರಂಜನಾ ಮೇಳಗಳಿರುವುದಿಲ್ಲ. ಸಾರ್ವಜನಿಕರಿಗೆ ಯಾವುದೇ ರೀತಿಯ ಅವಕಾಶವಿರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು. ತಾಲೂಕಡಳಿತದ ನಿರ್ದೇಶದಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವೆಸ್ಟ್‍ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದ್ದಾರೆ.

ದಾಂಡಿಯಾ

ದಾಂಡಿಯಾಕ್ಕೆ ಸಮಯಮಿತಿಯ ಅವಕಾಶ
ನವರಾತ್ರಿಯ ಒಂಬತ್ತು ದಿನಗಳ ಕಾಲುವ ನಡೆಯುವ ದಾಂಡಿಯಾಕ್ಕೆ ಸಮಯಮಿತಿಯ ಅವಕಾಶ ನೀಡಲಾಗಿದೆ. ಸಂಜೆ 7 ರಿಂದ 10 ಗಂಟೆಯವರೆಗೆ ಮಾತ್ರ ನಿಗದಿತ ಸ್ಥಳದಲ್ಲಿ ದಾಂಡಿಯಾ ನಡೆಸತಕ್ಕದ್ದು, ದಾಂಡಿಯಾ ನಡೆಸುವವರು, ಹಾಗೂ ದಾಂಡಿಯಾ ಕೋಲಾಟದಲ್ಲಿ ಭಾಗವಹಿಸುವವರು ಮತ್ತು ಆಗಮಿಸುವ ಪ್ರೇಕ್ಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡದಿರತಕ್ಕದ್ದು, ಆಗಮಿಸುವವರ ಹಾಜರಾತಿ ದಾಖಲಿಸತಕ್ಕದ್ದು. ಈ ನೀಯಮಗಳ ಪಾಲನೆಯೊಂದಿಗೆ ದಾಂಡಿಯಾ ನಡೆಸಲು ಅವಕಾಶ ನೀಡಲಾಗಿದೆ ಎಂದು ತಹಶೀಲ್ದಾರ ಶೈಲೇಶ ಪರಮಾನಂದ ತಿಳಿಸಿದ್ದಾರೆ.

ದುರ್ಗಾದೌಡ್ ಮೊದಲ ಬಾರಿ ದಾಂಡೇಲಿಯಲ್ಲಿ
ನವರಾತ್ರಿಯ ಸಂದರ್ಭದಲ್ಲಿ ಹಳಿಯಾಳದಲಿ ನಡೆಯುತ್ತಿದ್ದ ದುರ್ಗಾದೌಡ್ ಮೊದಲ ಬಾರಿ ದಾಂಡೇಲಿಯಲ್ಲಿ ಈ ವರ್ಷದಿಂದ ನಡೆಯುತ್ತಿದ್ದು, ಮುಂಜಾನೆ 5.30 ರಿಂದ ಈ ದುರ್ಗಾ ದೌಡ್ ಕಾರ್ಯಕ್ರಮ ನಡೆಯಲಿದೆ. ಪ್ರತೀ ದಿನ ಒಂದೊಂದು ಪ್ರದೇಶಗಳಿಗೆ ಈ ದುರ್ಗಾ ದೌಡ ಸಾಗಲಿದೆ. ಇದಕ್ಕೂ ಕೂಡಾ ಕೋವಿಡ್ ನಿಯಮಾವಳಿಗಳ ಪ್ರಕಾರ ಅವಕಶ ನೀಡಲಾಗಿದೆ ಎಂದು ತಹಶೀಲ್ದಾರ ಶೈಲೇಶ ಪರಮಾನಂದ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಆಲೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಲಕ್ಷ್ಮಣ ಜಾಧವ್, ಉಪಾಧ್ಯಕ್ಷೆ ನೂರಜಹಾನ ನದಾಪ್, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಸತೀಶ ಪೂಜಾರಿ, ನಗರಠಾಣೆಯ ಪಿ.ಎಸ್.ಐ ಯಲ್ಲಪ್ಪ ಎಸ್. ಗ್ರಾಮಿಣ ಠಾಣೆಯ ಪಿ.ಎಸ್.ಐ. ಐ.ಆರ್. ಗಡ್ಡೇಕರ, ಅಪರಾಧ ವಿಭಾಗದ ಪಿ.ಎಸ್.ಐ. ಕಿರಣ ಪಾಟಿಲ, ಯಲ್ಲಾರಲಿಂಗ್ ಕೊಣ್ಣೂರ, ದಾಂಡೇಲಪ್ಪ ದೇವಸ್ಥಾನದ ಅರ್ಚಕರಾದ ರಾಮದಾಸ ಮಿರಾಶಿ, ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಪ್ರಮುಖರಾದ ವಾಮನ ಮಿರಾಶಿ, ಕೃಷ್ಣ ಪೂಜಾರ, ಆನಂದಕುಮಾರ ಮಿರಾಶಿ, ಸುಭಾಶ ಭೋವಿವಡ್ಡರ್, ನಾಗರತ್ನ ನಾಯ್ಕ, ಮಾರುತಿ ಕಾಮ್ರೇಕರ, ಗಣಪತಿ ಬೇಖಣಿ ಮುಂತಾದವರಿದ್ದರು.

Exit mobile version