Site icon ಒಡನಾಡಿ

ಅಂಬೇಡ್ಕರರ ಪುತ್ಥಳಿ ಪ್ರತಿಷ್ಠಾಪಿಸೋದು ನನ್ನ ಬದುಕಿನ ಭಾಗ್ಯ ಅಂದುಕೊಂಡಿದ್ದೇನೆ: ದೇಶಪಾಂಡೆ

ಡಾ. ಬಿ.ಆರ್. ಅಂಬೇಡ್ಕರವರು ನಮ್ಮ ದೇಶಕ್ಕೆ ಸಂವಿದಾನ ಕೊಟ್ಟವರು. ಅವರು ಈ ದೇಶದ ಆಸ್ತಿ.  ಅಂತಹ ಮಹಾನ್ ವ್ಯಕ್ತಿಯ  ಪುತ್ಥಳಿ ಪ್ರತಿಷ್ಠಾಪಿಸುವುದು ನನ್ನ ಬದುಕಿನ ಭಾಗ್ಯ ಎಂದು ನಾನು ತಿಳಿದುಕೊಂಡಿದ್ದೇನೆ.  ಅತೀ ಶಿಘ್ರವಾಗಿ ಈ ಕಾರ್ಯ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು.

 ಅವರು ದಾಂಡೇಲಿ ನಗರಸಭೆಯ ಸಭಾಭವನದಲ್ಲಿ  ಡಾ. ಬಿ.ರ್. ಅಂಬೇಡ್ಕರ ಪುತ್ಥಳಿ ಪ್ರತಿಷ್ಠಾಪನೆಯ ಕುರಿತಾಗಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.  ಹಿಂದೆ ನಾನು ಸಚಿವನಿದ್ದಾಗ ದಾಂಡೇಲಿಯಲ್ಲಿ ಒಂಬತ್ತು ವiಹಾತ್ಮರ ಪುತ್ಥಳಿ ಸ್ಥಾಪಿಸಲು ಸರಕಾರದಿಂದ ಮಂಜೂರಿ ಮಾಡಿಸಿಕೊಂಡು ಬಂದಿದ್ದೆ. ಅದರಲ್ಲಿ ಛತ್ರಪತಿ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಈಗಾಗಲೇ ಆಗಿದೆ.  ಬಸವೇಶ್ವರರ ಪುತ್ಥಳಿ ನಿರ್ಮಾಣ ಹಂತದಲ್ಲಿದೆ. ಇದೀಗ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಗಾಗಿ ನಗರಸಭೆಯಿಂದ  ಹಣ ಮೀಸಲಿರಿಸಿದ್ದು, ಬೇರೆಡೆಯಿಂದ ಹಣ ತರುವ ಬಗ್ಗೆಯೂ ಪ್ರಯತ್ನಿಸಲಾಗುವುದು. ನಗರಸಭೆಯ ಆವರಣದಲ್ಲೇ ಇದನ್ನು ಪ್ರತಿಷ್ಠಾಪಿಸಲಾಗುವುದು. ತಕ್ಷಣ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.

  ಈಗಾಗಲೇ ಡಾ. ಅಂಬೇಡ್ಕರ ಪುತ್ಥಳಿ ಯಾವ ರೀತಿಯದ್ದಿರಬೇಕು ಎಂಬುದರ ನೀಲ ನಕ್ಷೆ ತರಿಸಲಾಗಿದೆ.  ಅಂಬೇಡ್ಕರ ಪುತ್ಥಳಿ ನಿರ್ಮಾಣ ಸಮಿತಿಯವರ ಸಲಹೆಯನ್ನೂ ಪಡೆಯಲಾಗಿದೆ. ಅವರೂ ಕೂಡಾ ಅದೇ ರೀತಿಯ ಪುತ್ಥಳಿ ನಿರ್ಮಿಸಲು  ಹೇಳಿದ್ದಾರೆ.  ಡಾ.ಅಂಬೇಡ್ಕರರು ಎಲ್ಲ ಸಮುದಾಯದ ನಾಯಕರು. ಅವರು ರಾಷ್ಟ್ರ ನಾಯಕರು ಹಾಗಾಗಿ ಈ ಕಾರ್ಯಕ್ಕೆ ಸಮಿತಿಯವರ ಜೊತೆಗೆ ಇಡೀ ದಾಂಡೇಲಿ ಸಹಕರಿಸಬೇಕು ಎಂದರು.

  ಡಾ. ಬಿ.ಆರ್. ಅಂಬೇಡ್ಕರ  ಪುತ್ಥಳಿ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ್ ಐ.ಎಚ್. ಮಾತನಾಡಿ ಪುತ್ಥಳಿ ನಿರ್ಮಿಸುವ ಕೆಲಸಕ್ಕೆ ಚುರುಕು ಮುಟ್ಟಿಸಲು ಪೂರ್ವಭಾವಿ ಸಭೆ ತೆಗೆದುಕೊಂಡ ದೇಶಪಾಂಡೆಯವರನ್ನು ಅಭಿನಂದಿಸಿ, ಪುತ್ತಳಿ ನಿವi್ರ್ತಣದ ಕುರಿತಂತೆ ತಮ್ಮ ಸಲಹೆ ನೀಡಿದರು. ಪ್ರಮುಖರಾದ ಚಂದ್ರಕಾಂತ ನಡಿಗೇರ, ರಾಜೇಂದ್ರ ಸೊಲ್ಲಾಪುರಿಯವರು ಪುತ್ತಳಿ ನಿರ್ಮಾಣಕ್ಕಾಗಿ ಆರ್.ವಿ. ದೇಶಪಾಂಡೆಯವರ ಸಹಕಾರ ಸ್ಮರಿಸಿದರು. ಸತೀಶ ನಾಯ್ಕ, ದೇವೇಂದ್ರ ಮಾದರ, ಭೀಮಶಿ ಬಾದುರ್ಲಿ ಮಾತನಾಡಿದರು.

ಸಭೆಯ ವಿಡಿಯೋ ನೋಡಿ….

  ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ತಹೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ್,  ನಗರಸಭಾ ಸದಸ್ಯರು ಹಾಗೂ ಅಂಬೇಡ್ಕರ ಪುತ್ಥಳಿ ನಿರ್ಮಾಣ ಸಮಿತಿಯ ಪ್ರಮುಖರಾದ ಸುರೇಶ ಖೇದಾರಿ,  ಸತೀಶ ಚೌಹಾಣ,  ಸದಾಶಿವ ಕಾಂಬಳೆ ಅಪ್ಪಾಸಾಬ್,  ರೇಣುಕಾ ಬಂದಂ, ಸರಸ್ವತಿ ಚೌಹಾಣ, ಬಿ.ಎಲ್. ಲಮಾಣಿ, ಶ್ರೀನಿತಾ ಕಾಂಬಳೆ ಮುಂತಾದವರಿದ್ದರು.

Exit mobile version